ಖರ್ಗೆ, ಪರಮೇಶ್ವರ್, ಜಮೀರ್ ಅಹ್ಮದ್ ಗೆ ಉಪಚುನಾವಣೆಯಿಲ್ಲ ಎಂದ ಸಚಿವ

ಶನಿವಾರ, 23 ನವೆಂಬರ್ 2019 (22:34 IST)
ರಾಜ್ಯದ ಕಾಂಗ್ರೆಸ್ ಮುಖಂಡರ ವಿರುದ್ಧ ಸಚಿವರೊಬ್ಬರು ಹರಿಹಾಯ್ದಿದ್ದಾರೆ.

ಅಥಣಿಯಲ್ಲಿ ಬಿಜೆಪಿ‌ ಮುಖಂಡ ಕೆ.ಎಸ್. ಈಶ್ವರಪ್ಪ ಹೇಳಿಕೆ ನೀಡಿದ್ದು, ಕಾಂಗ್ರೆಸ್ ದಾರಿ ತಪ್ಪಿ‌ಹೋಗಿದೆ.

ಮಲ್ಲಿಕಾರ್ಜುನ ಖರ್ಗೆ, ಪರಮೇಶ್ವರ, ಜಮೀರ ಅಹ್ಮದ ಅವರೆಲ್ಲ ಚುನಾವಣೆಯೇ ಇಲ್ಲ ಅಂತಾ ಮೌನ ವಹಿಸಿದ್ದಾರೆ.

ರಾಜ್ಯದ ಕಾಂಗ್ರೆಸ್ ಒಂದು ರೀತಿ ಸಿದ್ದು ಕಾಂಗ್ರೆಸ್ ಆಗಿದೆ. ಏಕವ್ಯಕ್ತಿ ಪಕ್ಷ ಆಗಿದೆ ಅಂತ ವ್ಯಂಗ್ಯವಾಡಿದ್ದಾರೆ.

ಇಡೀ ರಾಜ್ಯದ ಕಾಂಗ್ರೆಸ್ ನನ್ನದೇ ಎನ್ನುವಂತೆ ಸಿದ್ದರಾಮಯ್ಯ ಹೊರಟಿದ್ದಾರೆ.

ಕಾಂಗ್ರೆಸ್ ಗುಂಪುಗಾರಿಕೆಯಿಂದ ರಾಜ್ಯದಲ್ಲಿ ಅದರ ಬೆತ್ತಲೆ ಪ್ರದರ್ಶನ ನಡೆದಿದೆ ಎಂದು ಟೀಕೆ ಮಾಡಿದ್ದಾರೆ.



ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ