ಜಿಂಕೆಯನ್ನು ಬೇಟೆಯಾಡಿದ ಚಿರತೆ
ಚಿರತೆಯೊಂದು ಜಿಂಕೆಯನ್ನು ಬೇಟೆಯಾಡಿದ ದೃಶ್ಯ ಕ್ಯಾಮರಾ ಕಣ್ಣಿಗೆ ಸೆರೆಸಿಕ್ಕಿದೆ. ಮೈಸೂರಿನ ಹೆಚ್.ಡಿ.ಕೋಟೆಯ ಕುಟ್ಟ ಬಳಿಯ ನಾಗರಹೊಳೆಯ ಅಭಯಾರಣ್ಯದಲ್ಲಿ ಈ ದೃಶ್ಯ ಕಂಡು ಬಂದಿದೆ. ಚಿರತೆ ಜಿಂಕೆಯನ್ನು ಬೇಟೆಯಾಡಿ ತಿನ್ನುತ್ತಿರುವ ದೃಶ್ಯ ಪ್ರವಾಸಿಗರ ಮೊಬೈಲ್ ನಲ್ಲಿ ಸೆರೆಯಾಗಿದೆ. ಪ್ರವಾಸಿಗರು ಸಫಾರಿ ಹೋದ ವೇಳೆ ಈ ದೃಶ್ಯ ಕಣ್ಣಿಗೆ ಕಂಡಿದೆ. ಬೆಳಗ್ಗೆ ಚಿರತೆಯ ಬೇಟೆ ನೋಡಿದ ಪ್ರವಾಸಿಗರು ಫುಲ್ ಥ್ರಿಲ್ ಆಗಿದ್ದಾರೆ. ಮಾತ್ರವಲ್ಲದೆ ಸಾಮಾಜಿಕ ಜಾಲತಾಣದಲ್ಲೂ ಈ ದೃಶ್ಯ ಹಂಚಿಕೊಂಡಿದ್ದಾರೆ.