ಗ್ಯಾಸ್ ಲೀಕ್; ಹೊತ್ತಿ ಉರಿದ ಆಟೋ
ಏಕಾಏಕಿ ಆಟೋ ಹೊತ್ತಿ ಉರಿದ ಘಟನೆ ದೊಡ್ಡಬಳ್ಳಾಪುರ ನಗರದ ಬಸವ ಭವನದ ಬಳಿ ನಡೆದಿದೆ. ಗ್ಯಾಸ್ ಲೀಕ್ ಆಗಿ ಆಟೋ ಹೊತ್ತಿ ಉರಿದಿರುವ ಶಂಕೆ ವ್ಯಕ್ತವಾಗಿದ್ದು, ಗ್ಯಾಸ್ ತುಂಬಿಸಿಕೊಂಡು ಹೊರ ಬರುತ್ತಿರುವಾಗ ಈ ಘಟನೆ ಸಂಭವಿಸಿದೆ. ತಕ್ಷಣ ಬಂಕ್ ಸಿಬ್ಬಂದಿ ಮತ್ತು ಸಾರ್ವಜನಿಕರು ಬಂದು ಬೆಂಕಿ ನಂದಿಸಿದ್ದಾರೆ. ಅದೃಷ್ಟವಶಾತ್ ಯಾವುದೇ ರೀತಿಯ ಪ್ರಾಣಾಪಾಯ ಸಂಭವಿಸಿಲ್ಲ.