ಕಾಡಿನಲ್ಲಿ ಆಹಾರ ಸಿಗದೆ ಸಂಸದರ ಮನೆಯನ್ನು ಹುಡುಕಿಕೊಂಡು ಬಂದ ಚಿರತೆ: ಮುಂದೇನಾಯಿತು ಗೊತ್ತಾ

Sampriya

ಮಂಗಳವಾರ, 14 ಜನವರಿ 2025 (14:29 IST)
Photo Courtesy X
ಕಾರವಾರ: ಆಹಾರ ಅರಸಿ ಬಂದ ಚಿರತೆಯೊಂದು ಉತ್ತರ ಕನ್ನಡ ಜಿಲ್ಲೆಯ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಮನೆಗೆ ಬಂದಿದ್ದು, ಸಂಸದರ ಮನೆಯ ಸಾಕುನಾಯಿಯನ್ನು ಅಟ್ಟಿಸಿಕೊಂಡು ಹೋಗಿದೆ.

ಸಂಸದರ ಮನೆಯ ಸಿಸಿಟಿಟಿ ಕ್ಯಾಮೆರಾದಲ್ಲಿ ಈ ದೃಶ್ಯಗಳು ಸೆರೆಯಾಗಿದೆ. ಸೋಮವಾರ ಮಧ್ಯರಾತ್ರಿ ಶಿರಸಿ ತಾಲೂಕಿನ ಕಾಗೇರಿ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿಯವರು ಹಾಗೂ ಕುಟುಂಬ ಸದಸ್ಯರು ಮನೆಯಲ್ಲಿ ವಿಶ್ರಾಂತಿಯಲ್ಲಿದ್ದರು.

ಇದೇ ಸಂದರ್ಭದಲ್ಲಿ ಚಿರತೆ ಬಂದಿದ್ದು, ಮನೆಯ ಮುಂಭಾಗದಲ್ಲಿದ್ದ ಸಾಕುನಾಯಿಯನ್ನು ಅಟ್ಟಾಡಿಸಿಕೊಂಡು ಹೋಗಿದೆ. ಅದೃಷ್ಟವಶಾತ್ ಚಿರತೆ ದಾಳಿಯಿಂದ ಸಾಕು ನಾಯಿ ತಪ್ಪಿಸಿಕೊಂಡಿದೆ.

ರಾತ್ರಿ ಮನೆಯ ನಾಯಿ ಹೆಚ್ಚು ಕೂಗಿದ್ದರಿಂದಾಗಿ, ಇಂದು ಬೆಳಗ್ಗೆ ಮನೆಯವರು ಸಿಸಿಟಿವಿ ದೃಶ್ಯ ವೀಕ್ಷಿಸಿದಾಗ ಚಿರತೆ ಮನೆಗೆ ಬಂದ ವಿಷಯ ತಿಳಿದಿದೆ. ಘಟನೆ ಸಂಬಂಧ ಅರಣ್ಯಾಧಿಕಾರಿಗಳಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದ್ದಾರೆ.

ಸದ್ಯ ಚಿರತೆ ಇವರ ಮನೆಬಾಗಿಲಿಗೆ ಬಂದರೂ ಯಾವುದೇ ತೊಂದರೆಯಾಗಿಲ್ಲ. ಇನ್ನು ಈ ಭಾಗದಲ್ಲಿ ಚಿರತೆ ಓಡಾಟ ಸಾಮಾನ್ಯವಾಗಿದ್ದು, ಇತ್ತೀಚೆಗೆ ಅಹಾರ ಅರಸಿ ನಾಡಿನತ್ತ ಆಗಮಿಸುತಿದೆ. ಇದೇ ಮೊದಲ ಬಾರಿ ಕಾಗೇರಿ ಗ್ರಾಮದಲ್ಲಿ ಚಿರತೆ ಕಾಣಿಸಿಕೊಂಡಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ