ಆಸ್ಪತ್ರೆಯಲ್ಲಿ ಕೋತಿ ಕಾಟ; ರೋಗಿಗಳಿಗೆ ಶಾಕ್​​​

ಗುರುವಾರ, 30 ನವೆಂಬರ್ 2023 (17:43 IST)
ಚಿತ್ರದುರ್ಗದ ಸರ್ಕಾರಿ ಜಿಲ್ಲಾಸ್ಪತ್ರೆಯಲ್ಲಿ ಮಂಗಗಳ ಹಾವಳಿ ಹೆಚ್ಚಾಗಿದ್ದು, ಆಸ್ಪತ್ರೆಯ ವಾರ್ಡ್​​ಗೆ ನುಗ್ಗಿ ಮಂಗ ದಾಂಧಲೆ ನಡೆಸಿರುವ ದೃಶ್ಯ ಇದೀಗ ವೈರಲ್ ಆಗಿದೆ. ಮಂಗನ ದಾಂಧಲೆಯಿಂದ ವಾರ್ಡಲ್ಲಿದ್ದ ರೋಗಿಗಳು ಬೆಚ್ಚಿಬಿದ್ದಿದ್ದಾರೆ. ಆಹಾರಕ್ಕಾಗಿ ಜಿಲ್ಲಾಸ್ಪತ್ರೆಯ ವಾರ್ಡ್​​ಗೆ ಮಂಗ ನುಗ್ಗಿದೆ. ಕೋತಿಯ ಹಾವಳಿಯಿಂದ ಆಸ್ಪತ್ರೆಯ ರೋಗಿಗಳಲ್ಲಿ ಆತಂಕ ಮನೆಮಾಡಿದೆ. ಎರಡು ದಿನದ ಹಿಂದೆ ನಡೆದ ಘಟನೆಯ ವಿಡಿಯೋ ಇದೀಗ ವೈರಲ್ ಆಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ