ಶಾಲೆ ಆರಂಭವಾಗಿ ಒಂದುವರೆ ತಿಂಗಳಾದರೂ ಮಕ್ಕಳಿಗೆ ಸಿಕ್ಕಿಲ್ಲ ಶೂ ಸಾಕ್ಸ್ ಭಾಗ್ಯ…?

ಭಾನುವಾರ, 25 ಜೂನ್ 2023 (19:32 IST)
2017-18 ರಲ್ಲಿ ಕಾಂಗ್ರೆಸ್ ಸರ್ಕಾರ ಜಾರಿಗೆ ತಂದ 1 ರಿಂದ 10 ನೇ ತರಗತಿ ಮಕ್ಕಳಿಗೆ ಶೂ, ಸಾಕ್ಸ್‌ ವಿತರಣೆ ಈ ವರ್ಷ ಮತ್ತಷ್ಟು ವಿಳಂಬವಾಗುವ ಸಾಧ್ಯತೆ ಇದೆ. ಈಗಷ್ಟೆ ಸರ್ಕಾರ ಅನುದಾನ ಬಿಡುಗಡೆ ಮಾಡಿದ್ದು, ಇದು ಶಾಲಾ ಎಸ್‌ಡಿಎಂ ಸದಸ್ಯರ ಕೈ ಸೇರಲು ಇನ್ನೂ 1 ತಿಂಗಳು ಕನಿಷ್ಟ ಅವಧಿ ಬೇಕಾಗಿದೆ. ನಂತರ ಶೂ ಖರೀದಿ ಪ್ರಕ್ರಿಯೆಯೂ ಒಂದು ತಿಂಗಳು ಸಮಯ ತೆಗೆದುಕೊಳ್ಳುವ ಸಾಧ್ಯತೆ ಇರುವುದರಿಂದ ಶಾಲೆ ಆರಂಭವಾಗಿದ್ದರೂ, ಮಕ್ಕಳಿಗೆ ಶೂ ಭಾಗ್ಯ ಇನ್ನೆರಡು ತಿಂಗಳು ವಿಳಂಬವಾಗಲಿದೆ.ಈ ಬಾರಿ ಶಾಲಾ ವಿದ್ಯಾರ್ಥಿಗಳು ಶೂ ಮತ್ತು ಸಾಕ್ಸ್‌ ಹಾಕಿಕೊಳ್ಳಬೇಕಾದರೆ ಒಂದೆರಡು ತಿಂಗಳು ಕಾಯಲೇಬೇಕು. ಅಲ್ಲಿಯವರೆಗೆ ಕಳೆದ ವರ್ಷ ನೀಡಿದ ಶೂ ಧರಿಸುವುದು ಅಥವಾ ಬರಿಗಾಲಲ್ಲೇ ಶಾಲೆಗೆ ತೆರೆಳುವುದು ಅನಿವಾರ್ಯ ಎನ್ನಲಾಗ್ತಿದೆ, ಇನ್ನೂ ಇದರ ಬಗ್ಗೆ ಪೋಷಕರ ಸಂಘಟನೆಗಳು ಸಹ ಕಿಡಿಕಾಡಿದ್ದಾರೆ.

2023-24ನೇ ಸಾಲಿನಲ್ಲಿ ಶೂ ಮತ್ತು ಸಾಕ್ಸ್‌ಗಾಗಿ 125 ಕೋಟಿ ರೂ.ಗಳನ್ನು ಸರಕಾರ ಬಿಡುಗಡೆ ಮಾಡಿದೆ. ಇದು ಎಸ್‌ಡಿಎಂಸಿ ಅಧ್ಯಕ್ಷರ ಕೈ ಸೇರಬೇಕಾದಲ್ಲಿ ಕನಿಷ್ಠ ಒಂದು ತಿಂಗಳು ಬೇಕಿದೆ. ಆನಂತರ ಖರೀದಿ ಮಾಡಿ ವಿದ್ಯಾರ್ಥಿಗಳಿಗೆ ಸೇರಬೇಕಾದಲ್ಲಿ ಮತ್ತೊಂದು ತಿಂಗಳ ಅವಶ್ಯಕತೆ ಇದೆ. ಒಟ್ಟಾರೆ, ಎರಡು ತಿಂಗಳು ವಿದ್ಯಾರ್ಥಿಗಳು ಕಳೆದ ವರ್ಷದ ಶೂ ಅಥವಾ ಬರಿಗಾಲಿನಲ್ಲೇ ಶಾಲೆಗೆ ತೆರಳಬೇಕಾದ ಪರಿಸ್ಥಿತಿ ಇದೆ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ