ಕೋಮುಗಲಭೆಗೆ ಹೆಚ್ಚು ಸುದ್ದಿಯಾಗುತ್ತಿದ್ದ ದ.ಕನ್ನಡದಲ್ಲಿ ಗಮನ ಸೆಳೆದ ಮಸೀದಿ ದರ್ಶನ

Sampriya

ಸೋಮವಾರ, 15 ಸೆಪ್ಟಂಬರ್ 2025 (18:40 IST)
Photo Credit X
ಮಂಗಳೂರು: ಕೋಮುಗಲಭೆ ವಿಚಾರವಾಗಿ ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗುವ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇದೀಗ ಕೋಮು ಸೌಹಾರ್ದ ಗಮನ ಸೆಳೆಯುತ್ತಿದೆ. 

ಭಾನುವಾರ ಕುದ್ರೋಳಿಯ ಜಾಮೀಯಾ ಮಸೀದಿಯು ಸರ್ವಧರ್ಮ ಸಾಮರಸ್ಯವನ್ನು ಉತ್ತೇಜಿಸುವ ಮತ್ತು ತಪ್ಪು ಕಲ್ಪನೆಗಳನ್ನು ಹೋಗಲಾಡಿಸಲು ಭಾನುವಾರ ವಿಭಿನ್ನ ಕಾರ್ಯಕ್ರಮವೊಂದನ್ನು ಹಮ್ಮಿಕೊಂಡಿತು.

ನಿನ್ನೆ ಕುದ್ರೋಳಿ ಜಾಮಿಯಾ ಮಸೀದಿಯಲ್ಲಿ ನಡೆದ “ಸಾರ್ವಜನಿಕ ಮಸೀದಿ ದರ್ಶನ” ಕಾರ್ಯಕ್ರಮವು ಸರ್ವಧರ್ಮೀಯರನ್ನು ಒಟ್ಟುಗೂಡಿಸಿ ಗಮನ ಸೆಳೆಯಿತು.

ಕುದ್ರೋಳಿ ಮಸೀದಿ ನಿರ್ವಹಣಾ ಸಮಿತಿಯು ಮುಸ್ಲಿಂ ಐಖ್ಯಾತ ವೇದಿಕೆ(MAV), ಕುದ್ರೋಳಿ ಮತ್ತು ಜಮಾತೆ-ಇ-ಇಸ್ಲಾಮಿ ಹಿಂದ್(JIH) ಸಹಯೋಗದೊಂದಿಗೆ ಮಂಗಳೂರಿನಲ್ಲಿ ಈ ವಿಶೇಷ ಕಾರ್ಯಕ್ರಮನ್ನು ಆಯೋಜಿಸಿತ್ತು. ಈ ವಿಶೇಷ ಕಾರ್ಯಕ್ರಮದಲ್ಲಿ ವಿವಿಧ ಧಾರ್ಮಿಕ ಹಿನ್ನೆಲೆಯ ಮುಖಂಡರು, ಸಂದರ್ಶಕರು ಮಸೀದಿಗೆ ಭೇಟಿ ನೀಡಿದರು.



ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ