ಮೂರು ಮಕ್ಕಳಿಗೆ ವಿಷವುಣಿಸಿ ನೇಣಿಗೆ ಕೊರಳೊಡ್ಡಿದ ತಾಯಿ...!
ಗಂಡ ಹೆಂಡತಿ ಮತ್ತು ಮೂರು ಮಕ್ಕಳು. ಆ ಕುಟುಂಬವನ್ನು ನೋಡಿ ಖುಷಿ ಪಟ್ಟವರು ಎಷ್ಟೋ, ಹೊಟ್ಟೆಕಿಚ್ಚು ಪಟ್ಟವರೆಷ್ಟೋ ಜನರು. ಮೊದಲೇ ಲವ್ ಮ್ಯಾರೇಜ್ ಅದು. ಹೀಗಾಗಿ ಗಂಡ-ಹೆಂಡತಿ ಮದುವೆಯಾಗಿ 10 ವರ್ಷವಾದ್ರೂ, ಅನ್ಯೋನ್ಯವಾಗಿದ್ರು. ಆದರೆ ಅವತ್ತೊಂದು ದಿನ ಗಂಡ ಮನೆಯಲ್ಲಿಲ್ಲದಿದ್ದಾಗ ಹೆಂಡತಿ ತನ್ನ ಮೂವರು ಮಕ್ಕಳಿಗೆ ವಿಷ ಉಣಿಸಿ ತಾನೂ ನೇಣಿಗೆ ಶರಣಾಗಿಬಿಟ್ಟಿದ್ಲು.