ರಾಜ್ಯದಲ್ಲಿ ಹವಾಮಾನ ವೈಪರೀತ್ಯದಿಂದ ವೈರಲ್ ಜ್ವರ

ಸೋಮವಾರ, 12 ಡಿಸೆಂಬರ್ 2022 (18:11 IST)
ರಾಜ್ಯದಲ್ಲಿ ಹವಾಮಾನ ವೈಪರೀತ್ಯದಿಂದ ವೈರಲ್ ಜ್ವರ, ಡೆಂಗ್ಯೂ, ಚಿಕುನ್ ಗುನ್ಯಾ, ಮಲೇರಿಯಾ ಸೇರಿದಂತೆ ಸಾಂಕ್ರಾಮಿಕ ರೋಗಗಳು ಉಲ್ಬಣಗೊಂಡಿವೆ. ಒಂದೇ ತಿಂಗಳಲ್ಲಿ 930 ಡೆಂಗ್ಯೂ, 171 ಚಿಕುನ್‌ಗುನ್ಯಾ ಪ್ರಕರಣಗಳು ಪತ್ತೆಯಾಗಿರುವುದು ಆತಂಕ ಹುಟ್ಟಿಸಿದೆ. ಈ ನಡುವೆ ಎರಡು ದಿನಗಳದ ಸುರಿಯು ತ್ತಿರುವ ಮಳೆ ಮತ್ತಷ್ಟು ಭೀತಿ ಸೃಷ್ಟಿಸಿದೆ. ಚಳಿ ಹಾಗೂ ಮಳೆಯ ವಾತಾವರಣದಿಂದ ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ ವೈರಲ್ ಜ್ವರದ ಹಾವಳಿಗೆ ಜನ ತತ್ತರಿಸಿದ್ದಾರೆ. ಜ್ವರದ ಜತೆಗೆ ಅತಿಯಾದ ಕೆಮ್ಮು, ಶೀತ, ಗಂಟಲು, ತಲೆನೋವು, ಮೈಕೈ ನೋವು ಮುಂತಾದ ಅನಾರೋಗ್ಯ, ಲಕ್ಷಣಗಳಿಂದ ವೈದ್ಯರ ಮೊರೆ ಹೋಗುವವರ ಸಂಖ್ಯೆ ಏರಿಕೆಯಾಗಿದೆ. ಇನ್ನು ಡಾ. ಆದಿತ್ಯ ಚೌದ್ರಿ ಭಯ ಪಡುವ ಅಗತ್ಯವಿಲ್ಲ ಹವಾಮಾನ ಬದಲಾವಣೆ ಇದಕ್ಕೆಲ್ಲ ಕಾರಣ ಎಂದು ತಿಳಿಸಿದ್ದಾರೆ. 
 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ