4 ವರ್ಷದ ಮಗಳು ಬಿಡಿಸಿದ ಚಿತ್ರದಿಂದ ಬಯಲಾಯಿತು ತಾಯಿಯ ಮರ್ಡರ್ ರಹಸ್ಯ

Sampriya

ಮಂಗಳವಾರ, 18 ಫೆಬ್ರವರಿ 2025 (20:25 IST)
ಲಕ್ನೋ: ಈ ವಾರದ ಆರಂಭದಲ್ಲಿ ಉತ್ತರ ಪ್ರದೇಶದ ಝಾನ್ಸಿಯಲ್ಲಿ 27 ವರ್ಷದ ಮಹಿಳೆಯೊಬ್ಬರು ಮೃತದೇಹ ಅನುಮಾನಸ್ಪದವಾಗಿ ಆತ್ಮಹತ್ಯೆ ಮಾಡಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಇದೀಗ ನಾಲ್ಕು ವರ್ಷದ ಮಗಳು ಬಿಡಿಸಿದ ತನ್ನ ತಂದೆಯೇ ತನ್ನ ತಾಯಿಯನ್ನು ಕೊಂದಿದ್ದಾನೆ ಎಂದು ತೋರಿಸಿದೆ.

ಕೊತ್ವಾಲಿ ಪ್ರದೇಶದ ಪಂಚವಟಿ ಶಿವ ಪರಿವಾರ ಕಾಲೋನಿಯಲ್ಲಿ ಈ ಘಟನೆ ನಡೆದಿದ್ದು, ಮಹಿಳೆ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಆಕೆಯ ಸಂಬಂಧಿಕರು ಮನೆಯವರಿಗೆ ತಿಳಿಸಿದ್ದರು. ಇದೀಗ ಆಕೆಯ ನಾಲ್ಕು ವರ್ಷದ ಮಗಳು ಬಿಡಿಸಿದ ಚಿತ್ರ ತನ್ನ ತಂದೆಯೇ ತಾಯಿಯನ್ನು ಕೊಂದಿರುವುದಾಗಿ ತೋರಿಸಿಕೊಟ್ಟಿದೆ.

2019ರಲ್ಲಿ ಝಾನ್ಸಿ ನಿವಾಸಿಯಾದ ಸಂದೀಪ್ ಬುದೋಲಿನನ್ನು ಮೃತ ಮಹಿಳೆ ವಿವಾಹವಾಗಿದ್ದರು. ಮದುವೆಯ ಸಂದರ್ಭದಲ್ಲಿ 20 ಲಕ್ಷ ರೂ. ಹಣ ಹಾಗೂ ಇನ್ನಿತರ ಉಡುಗೊರೆಗಳನ್ನು ವರದಕ್ಷಿಣೆ ರೂಪದಲ್ಲಿ ಸಂದೀಪ್‌ಗೆ ನೀಡಲಾಗಿತ್ತು.  ಆದರೆ ವರದಕ್ಷಿಣೆ ನೀಡುವಂತೆ ಆಕೆಗೆ ದೈಹಿಕ ಹಾಗೂ ಮಾನಸಿಕವಾಗಿ ಹಿಂಸೆ ನೀಡುತ್ತಿದ್ದರು ಎಂದು ಮೃತಳ ಮನೆಯವರು ದೂರಿದ್ದಾರೆ.

ಪೊಲೀಸರು ತನಿಖೆ ಆರಂಭಿಸಿದ್ದು, ಮಹಿಳೆಯ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಬೇಟೆಯ ನಂತರ ಪತಿಯನ್ನು ಬಂಧಿಸಲಾಗಿದ್ದು, ಇತರ ಆರೋಪಿಗಳಿಗಾಗಿ ಶೋಧ ನಡೆಯುತ್ತಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ