ಆಟೋ ಹಿಂದೆ ಬರೆದ ಪೋಸ್ಟ್ ಎಲ್ಲೆಲ್ಲೂ ವೈರಲ್

ಬುಧವಾರ, 26 ಜುಲೈ 2023 (14:00 IST)
ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಕನ್ನಡಿಗರು ಹಾಗೂ ಪರಭಾಷಿಕರ ನಡುವೆ ತಿಕ್ಕಾಟ ನಡೆಯುತ್ತಲೇ ಇದೆ. ಹೀಗೆ ಕನ್ನಡ ಬಂದರೂ ಮಾತನಾಡದೆ ಅಥವಾ ಕರ್ನಾಟಕದಲ್ಲಿ ಹಲವು ವರ್ಷಗಳಿಂದ ಇದ್ದೂ ಕನ್ನಡ ಭಾಷೆಯ ಬಗ್ಗೆ ಅಗೌರವ ತೋರುವವರ ಸಂಖ್ಯೆ ಹೆಚ್ಚು. ಹೀಗೆ ಕಿರಿಕ್ ಮಾಡುವ ಪರಭಾಷಿಕರ ಬಗ್ಗೆ ಆಟೋ ಚಾಲಕನೊಬ್ಬ ಹಾಕಿಕೊಂಡ ಬರಹ ಈಗ ಎಲ್ಲೆಲ್ಲೂ ವೈರಲ್ ಆಗಿದೆ. ನೀನು ಕರ್ನಾಟಕದಲ್ಲಿರುವೆ. ಕನ್ನಡ ಕಲಿ. ಅಹಂಕಾರ ತೋರಿಸಬೇಕಡ. ನೀನು ಇಲ್ಲಿಗೆ ಭಿಕ್ಷೆ ಬೇಡಲು ಬಂದಿದ್ದೀಯಾ ಎಂದು ಆಟೋದ ಹಿಂದೆ ಚಾಲಕರೊಬ್ಬರು ಬರಹ ಹಾಕಿದ್ದಾರೆ. ಇನ್ನೂ ಈ ಫೋಟೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ಪರ ವಿರೋಧದ ಚರ್ಚೆ ಕೂಡ ಆರಂಭವಾಗಿದೆ.
 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ