ಗರ್ಭಿಣಿ ನಾಯಿಗೆ ಸೀಮಂತ, ಬಳೆ ಶಾಸ್ತ್ರ ಮಾಡಿದ ಪೊಲೀಸ್: ಹೀಗೊಬ್ಬ ಶ್ವಾನಪ್ರೇಮಿ

ಬುಧವಾರ, 8 ಡಿಸೆಂಬರ್ 2021 (19:39 IST)
ನೆಚ್ಚಿನ ನಾಯಿ ಸೂಜಿಗೆ ಹೂವಿನ ಹಾರ ಹಾಕಲಾಯಿತು ಮತ್ತು ಬಳೆ ಶಾಸ್ತ್ರಕ್ಕೆ ಬಂದಿದ್ದ ನೆರೆಯ ಮಹಿಳೆಯರೆಲ್ಲಾ ಸೇರಿ ಅದರ ಕಾಲುಗಳಿಗೆ ಬಳೆಗಳನ್ನು ತೊಡಿಸಿದರು. ಸಮಾರಂಭಕ್ಕೆ ಬಂದಿದ್ದ ಅತಿಥಿಗಳಿಗೆ 5 ರೀತಿಯ ತಿನಿಸುಗಳುಳ್ಳ ಭೋಜನ ಬಡಿಸಲಾಯಿತು.ಪ್ರಾಣಿ ಪ್ರಿಯರು ತಮ್ಮ ಮುದ್ದಿನ ಸಾಕು ಪ್ರಾಣಿಗಳ ಬಗೆಗಿನ ಪ್ರೀತಿ(Pet Loves) ವ್ಯಕ್ತಪಡಿಸಲು ಕೆಲವೊಮ್ಮೆ ಯಾವ ಹಂತಕ್ಕೆ ಬೇಕಾದರೂ ಹೋಗುತ್ತಾರೆ. ಅವರ ಅಂತಹ ಕೆಲಸಗಳು ಕೆಲವೊಮ್ಮೆ ವಿಲಕ್ಷಣವೆನಿಸಿದರೆ, ಇನ್ನು ಕೆಲವೊಮ್ಮೆ ಅದ್ಭುತ ಎನಿಸುವುದುಂಟು, ಮತ್ತೆ ಕೆಲವೊಮ್ಮೆ ಅಚ್ಚರಿ ಉಂಟು ಮಾಡುತ್ತವೆ ಕೂಡ. ತಮಿಳುನಾಡಿನ ಶಕ್ತಿವೇಲು (Shakthivel)ಎಂಬವರು ಅಂತಹ ಪ್ರಾಣಿ ಪ್ರಿಯರಲ್ಲಿ ಒಬ್ಬರು. ಮಧುರೈ ಜಿಲ್ಲೆಯಲ್ಲಿ (Tamil Nadu’s Madurai) ಸಬ್ ಇನ್‍ಸ್ಪೆಕ್ಟರ್ (Sub-inspector)ಆಗಿ ಕಾರ್ಯ ನಿರ್ವಹಿಸುತ್ತಿರುವ ಅವರು, ಗರ್ಭಿಣಿಯಾಗಿರುವ ತನ್ನ ಸಾಕು ನಾಯಿ ಸೂಜಿಗಾಗಿ ಬಳೆ ಶಾಸ್ತ್ರ ಏರ್ಪಡಿಸಿದ್ದರು. ಅವರ ಮನೆಯಲ್ಲಿ ನಡೆದ ಆ ಬಳೆ ಶಾಸ್ತ್ರವನ್ನು(Bangle ceremony) ಊರ ಮಂದಿ ಅಚ್ಚರಿ ಮತ್ತು ಕುತೂಹಲದಿಂದ ವೀಕ್ಷಿಸಿದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ