ಕೇರಳ ನರ್ಸ್ ನಿಮಿಷಾ ಪ್ರಿಯಾ ಮರಣದಂಡನೆ ಸಂಪೂರ್ಣವಾಗಿ ರದ್ದು
ಯೆಮನ್ ನಲ್ಲಿ ಕೇರಳ ಮೂಲದ ನರ್ಸ್ ನಿಮಿಷ ಪ್ರಿಯಾ ಗಲ್ಲುಶಿಕ್ಷೆ ರದ್ದಾಗಿದೆ ಎಂದು ಭಾರತದ ಗ್ರ್ಯಾಂಡ್ ಮುಫ್ತಿ ಕಾಂತಾಪುರಂ ಎಪಿ ಅಬೂಬಕರ್ ಮುಸ್ಲಿಯಾರ್ ಅವರ ಕಚೇರಿ ಹೇಳಿಕೆ ನೀಡಿದೆ.
ಯೆಮನ್ ರಾಜಧಾನಿ ಸನಾದಲ್ಲಿ ನಡೆದ ಉನ್ನತ ಮಟ್ಟದ ಅಧಿಕಾರಿಗಳ ಸಭೆಯಲ್ಲಿ ಗಲ್ಲು ಶಿಕ್ಷೆ ರದ್ದುಗೊಳಿಸುವ ನಿರ್ಧಾರಕ್ಕೆ ಬರಲಾಗಿದೆ ಎಂದು ಗ್ರ್ಯಾಂಡ್ ಮುಫ್ತಿ ಕಚೇರಿ ಮಾಹಿತಿ ನೀಡಿದೆ. ಆದರೆ ಈ ಬಗ್ಗೆ ಇನ್ನೂ ಯೆಮನ್ ಸರ್ಕಾರದಿಂದ ಅಧಿಕೃತ ಪ್ರಕಟಣೆ ಬಂದಿಲ್ಲ.
ನಿಮಿಷ ಪ್ರಿಯಾಳನ್ನು ಉಳಿಸಕೊಳ್ಳುವ ಸಲುವಾಗಿ ಆಕೆಯ ಪತಿ ಮತ್ತು ಮಗಳು ಯೆಮನ್ ಗೆ ತೆರಳಿದ್ದರು. ನನ್ನ ಅಮ್ಮನನ್ನು ಉಳಿಸಿಕೊಡಿ ಎಂದು ಮಗಳು ಅಂಗಲಾಚಿದ್ದಳು. ಇದರ ಬೆನ್ನಲ್ಲೇ ಇಂತಹದ್ದೊಂದು ಘೋಷಣೆ ಹೊರಬಂದಿದೆ.