ದೇವರ ದರ್ಶನಕ್ಕೆ ಬಂದು ಪೊಲೀಸರ ಖೆಡ್ಡಕ್ಕೆ ಬಿದ್ದ ರೌಡಿಶೀಟರ್

ಬುಧವಾರ, 23 ನವೆಂಬರ್ 2022 (13:16 IST)
ಪ್ರತಿವರ್ಷ ಕಡಲೆಕಾಯಿ ಪರಿಷೆಗೆ ಬಂದು ದೇವರ ದರ್ಶನ ಪಡೆಯುತಿದ್ದ ರೌಡಿಶಿಟರ್ ಪೃಥ್ವಿಕ್ ಈ ವರ್ಷವು ದೇವರ ದರ್ಶನ ಪಡೆಯಲು ಬಂದಿದ್ದ. ಬುಲ್ ಟೆಂಪಲ್ ಗೆ ಬಂದು ದೇವರ ದರ್ಶನ ಪಡೆಯುದನ್ನು  ಬಸವನಗುಡಿ ಪೊಲೀಸರು ತಿಳಿದಿದ್ದು,ಕಡಲೆಕಾಯಿ ಪರಿಷೆಯಲ್ಲಿ  ರೌಡಿ ಶೀಟರ್ ಪೃಥ್ವಿಕ್ ಸಹಚರ ಭೂಷಣ್ ಸಿಕ್ಕಿಬಿದ್ದಿದ್ದಾನೆ.ಹಲವು ಪ್ರಕರಣಕ್ಕೆ ಬೇಕಾಗಿದ್ದ ರೌಡಿ ಶೀಟರ್ ಪೃಥ್ವಿಕ್ ಬರುತ್ತನೆಂದು ಬಸವನಗುಡಿ ಪೊಲೀಸರು ಹೊಂಚು ಹಾಕಿ ಕುಳಿತ್ತಿದರು.
 
ಪೃಥ್ವಿಕ್  ಮೇಲೆ ಕೊಲೆ ,ಕೊಲೆ ಯತ್ನ ಬೆದರಿಕೆ ಸೇರಿ ಹಲವು ಪ್ರಕರಣಗಳು ಇದ್ವು ,ಬಸವನಗುಡಿ , ವಿಲ್ಸನ್ ಗಾರ್ಡನ್ ಸೇರಿ ಹಲವು ಠಾಣೆಯಲ್ಲಿ ಪೃಥ್ವಿಕ್ ವಾಂಟೆಡ್‌ ಅಗಿದ್ದ.ಸದ್ಯ ಕಡಲೆಕಾಯಿ ಪರಿಷೆಯಲ್ಲಿ‌ ಕಡಲೆ ತಿನ್ನಲು ಬಂದವನಿಗೆ‌ ಪೊಲೀಸರು ಜೈಲಿನ ದಾರಿ ತೋರಿಸಿದ್ದಾರೆ.ಇದೀಗ ಬಸವನಗುಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ