ಎನ್ ಡಿಎ ಸಂಸದರು ಏನು ಇಂಡಿಯಾ ಗೇಟ್ ಕಾಯಕ್ಕೆ ಇದ್ದಾರಾ: ನಾಲಿಗೆ ಹರಿಬಿಟ್ಟ ಪ್ರದೀಪ್ ಈಶ್ವರ್

Krishnaveni K

ಮಂಗಳವಾರ, 21 ಅಕ್ಟೋಬರ್ 2025 (14:32 IST)
ಬೆಂಗಳೂರು: ಎನ್ ಡಿಎಯಿಂದ ಗೆದ್ದ ರಾಜ್ಯದ 19 ಸಂಸದರು ಏನು ಇಂಡಿಯಾ ಗೇಟ್ ಕಾಯಕ್ಕೆ ಇದ್ದಾರಾ ಎಂದು ಕಾಂಗ್ರೆಸ್ ಶಾಸಕ ಪ್ರದೀಪ್ ಈಶ್ವರ್ ನಾಲಿಗೆ ಹರಿಬಿಟ್ಟದ್ದಾರೆ.

ಸದಾ ಒಂದಿಲ್ಲೊಂದು ವಿವಾದಾತ್ಮಕ ಶಬ್ಧಗಳಿಂದಲೇ ವಿಪಕ್ಷ ಬಿಜೆಪಿಯನ್ನು ನಿಂದಿಸುವ ಪ್ರದೀಪ್ ಈಶ್ವರ್ ಈ ಬಾರಿ ಬಿಜೆಪಿ ಮತ್ತು ಜೆಡಿಎಸ್ ಸಂಸದರಿಗೆ ಟಾಂಗ್ ಕೊಟ್ಟಿದ್ದಾರೆ. ರಾಜ್ಯದಿಂದ ಆಯ್ಕೆಯಾದ 19 ಎನ್ ಡಿಎ ಸಂಸದರು ಏನು ಇಂಡಿಯಾ ಗೇಟ್ ಕಾಯಕ್ಕೆ ಇದ್ದಾರಾ? ರಾಜ್ಯಕ್ಕೆ ಬರಬೇಕಾದ ಪರಿಹಾರ ಕೇಂದ್ರದಿಂದ ಕೊಡಿಸಲಿ ಎಂದಿದ್ದಾರೆ.

ಕೇಂದ್ರ ಸರ್ಕಾರಕ್ಕೆ ರಾಜ್ಯದ ಮೇಲೆ ತುಂಬಾ ಕೋಪವಿದೆ ಎನಿಸುತ್ತದೆ. ಅದಕ್ಕೇ ನಮ್ಮಲ್ಲಿ ನೆರೆಯಿಂದಾಗಿ ಹಾನಿಯಾದರೂ ಕೇವಲ 384 ಕೋಟಿ ರೂ. ನೀಡಿದ್ದಾರೆ. ಮಹಾರಾಷ್ಟ್ರಕ್ಕೆ 1556 ಕೋಟಿ ರೂ. ಕೊಟ್ಟಿದ್ದಾರೆ. ಆರ್ ಅಶೋಕ್ ಇದನ್ನೇ ದೊಡ್ಡ ಸಾಧನೆ ಎಂಬಂತೆ ಟ್ವೀಟ್ ಮಾಡುತ್ತಾರೆ. ಪರಿಹಾರ ಕೇಳಿ ಎಂದು ಬಿಜೆಪಿಯವರಿಗೆ ಹೇಳಿದರೆ ನೀವೇ ಕೇಳಿ ಎನ್ನುತ್ತಾರೆ. ಹಾಗಿದ್ದರೆ 19 ಸಂಸದರು ಯಾಕಿದ್ದಾರೆ. ಆರ್ ಅಶೋಕ್ ಗೆ ತಾಕತ್ತಿದ್ದರೆ ಕೇಂದ್ರ ಬಳಿ ಪರಿಹಾರ ಕೇಳಲಿ ಎಂದು ವಾಗ್ದಾಳಿ ನಡೆಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ