ಕರೋನಾ ಹಿನ್ನಲೆ 20-21ರ ಸಾಲಿನ ವರ್ಷದ
.. ಮಕ್ಕಳ ಶಾಲಾ ಶುಲ್ಕ ಕಟ್ಟಿದ 60 ಮಕ್ಕಳನ್ನು ಕಾಂಪೌಂಡ್ ಒಳಗಡೆಯ ನೆಲದಲ್ಲಿ ಕೂರಿಸಿ ಕಿರುಕುಳ.. ಈ ರೀತಿ ವಿನೂತನ ತಾರತಮ್ಯ ಮಾಡಲು ಹೊರಟಿದೆ ದೊಡ್ಡಬಳ್ಳಾಪುರದ ಶಾಲೆ.. ಶುಲ್ಕ ವಸೂಲಿಗೆ ಇಳಿದ ದೊಡ್ಡಬಳ್ಳಾಪುರದ ಜ್ಞಾನಗಂಗಾ ವಿದ್ಯಾಸಂಸ್ಥೆ ವಿದ್ಯಾರ್ಥಿಗಳನ್ನ ತರಗತಿಯಿಂದ ಹೊರಗೆ ಕೂರಿಸಿ ಪೋಷಕರ ಮೇಲೆ ಒತ್ತಡ ತಂತ್ರ ಹಾಕುತ್ತಿದೆ..
ದೊಡ್ಡಬಳ್ಳಾಪುರ ಜ್ಞಾನಗಂಗಾ ವಿದ್ಯಾಸಂಸ್ಥೆ ಶಾಲಾ ಶುಲ್ಕ ವಸೂಲಿಗೆ ಅವಿವೇಕತನದ ದಾರಿ ಹಿಡಿದಿದೆ..ಕಳೆದ ವರ್ಷದಿಂದ ಪೋಷಕರು ಶಾಲೆಗಳತ್ತ ಮುಖ ಮಾಡಿಲ್ಲ..ಎಷ್ಟು ಬಾರಿ ಕರೆ ಮಾಡಿದರೂ ಸ್ಪಂದಿಸುತ್ತಿಲ್ಲ. ಹೀಗಾಗಿ ಮಕ್ಕಳನ್ನು ತರಗತಿಯಿಂದ ಹೊರಗೆ ಕೂರಿಸಲಾಗಿದೆ.. ಸರಕಾರದ ನಿಯಮದಂತೆ ಶೇ 70 ರಷ್ಟು ಮಾತ್ರ ಶುಲ್ಕ ವಸೂಲಿ ಮಾಡಲಾಗುತ್ತಿದೆ.. ಕೆಲ ಪೋಷಕರಿಂದ ಎಷ್ಟು ಹಣ ಕಟ್ಟಲು ಸಾಧ್ಯವೋ ಅಷ್ಟು ಮಾತ್ರ ಕಟ್ಟಿಸಿಕೊಳ್ಳಲು ಹೇಳಲಾಗಿದೆ.. ಶಾಲೆಯ ಬಳಿಗೆ ಬರದೆ ಮೊಂಡು ಬಿದ್ದಿರುವ ಪೋಷಕರಿಗೆ ಮನವರಿಕೆ ಮಾಡಲು ಈ ರೀತಿಯ ಕ್ರಮ ತೆಗೆದುಕೊಳ್ಳಲಾಗ್ತಿದೆ.. ಷೋಷಕರೂ ಸಹ ಆಡಳಿತ ಮಂಡಳಿಯ ಕಷ್ಟ ಅರಿತುಕೊಳ್ಳಬೇಕಿದೆ.. ನಮಗೂ ಶಾಲೆ ನಡೆಸಲು ಕಷ್ಟವಾಗ್ತಿದೆ ಎಂದು ವಿದ್ಯಾರ್ಥಿಗಳನ್ನ ಹೊರಗೆ ಕೂರಿಸಿದ ಬಗ್ಗೆ ಆಡಳಿತ ಮಂಡಳಿ ಸಮರ್ಥಿಸಿಕೊಂಡಿದೆ..
ಸರ್ಕಾರದ ಮಾರ್ಗಸೂಚಿಯಂತೆ ಯಾರೂ ಕೂಡ ಮಕ್ಕಳನ್ನು ತರಗತಿಯಿಂದ ಹೊರಗೆ ಕೂರಿಸಬಾರದು..ಶಾಲಾ ಶುಲ್ಕ ಕಟ್ಟುವ ವಿಷಯ ಪೋಷಕರು ಮತ್ತು ಆಡಳಿತ ಮಂಡಳಿಗೆ ಸೇರಿದ್ದು.. ಸರ್ಕಾರ ಎಷ್ಟು ಶುಲ್ಕ ನಿಗದಿ ಮಾಡಿದೆಯೋ ಅಷ್ಟು ಮಾತ್ರ ಶುಲ್ಕ ವಸೂಲಿ ಮಾಡಬೇಕು.. ಸರಕಾರ ಮಕ್ಕಳನ್ನು ಶಿಕ್ಷಣದಿಂದ ಹೊರಗೆ ಉಳಿಸಬಾರದು ಎಂದು ಕಟ್ಟು ನಿಟ್ಟಿನ ಸುತ್ತೋಲೆ ಹೊರಡಿಸಲಾಗಿದೆ.. ಮತ್ತೆ ಈ ರೀತಿಯ ಘಟನೆ ಮರುಕಳಿಸದಂತೆ ಕಟ್ಟು ನಿಟ್ಟಿನ ಕ್ರಮ ತೆಗೆದುಕೊಳ್ಳಲಾಗುವುದು ಎಂದು BEO ಶುಭಮಂಗಳ ತಿಳಿಸಿದರು