ಬೆಂಗಳೂರು:ಕಳೆದ ತಿಂಗಳು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಆದಾಯ ತೆರಿಗೆ ವೆಬ್ ಸೈಟ್ ನಲ್ಲಿ ಆಗಿರುವ ತಾಂತ್ರಿಕ ತೊಂದರೆಗಳನ್ನು ಸ್ಪೆಟೆಂಬರ್ 15 ರೊಳಗೆ ಸರಿಪಡಿಸಲು ಇನ್ಫೋಸಿಸ್ ಸಂಸ್ಥೆಗೆ ಸೂಚನೆ ನೀಡಿದ್ದರು. ಈ ಹಿನ್ನಲೆಯಲ್ಲಿ ಇನ್ಫೋಸಿಸ್ ಸಂಸ್ಥೆ ಪತ್ರಿಕಾ ಪ್ರಕಟಣೆ ಹೋರಾಡಿಸುವ ತಾಂತ್ರಿಕ ತೊಂದರೆ ಸರಿಪಡಿಸಲಾಗಿದೆ, 3 ಕೋಟಿಗೂ ಹೆಚ್ಚು ತೆರಿಗೆದಾರರು 1.5 ಕೋಟಿ ರೂ ಆದಾಯ ತೆರಿಗೆ ರಿಟರ್ನ್ಸ್ ಪೋರ್ಟಲ್ ಮೂಲಕ ಸಲ್ಲಿಸಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.
ಇನ್ಫೋಸಿಸ್ ಮುಂದಿನ ಪೀಳಿಗೆಯ ಡಿಜಿಟಲ್ ಸೇವೆಗಳಲ್ಲಿ ಮುಂಚೂಣಿಯಲ್ಲಿರುವ ಆದಾಯ ತೆರಿಗೆ ಇ-ಫೈಲಿಂಗ್ ಪೋರ್ಟಲ್‌ನಲ್ಲಿ ಸಾಧಿಸುತ್ತಿರುವ ಪ್ರಗತಿಯ ಕುರಿತು ಇನ್ಫೋಸಿಸ್ ಸಂಸ್ಥೆ ಸಂಪೂರ್ಣ ಮಾಹಿತಿ ಹಂಚಿಕೊಂಡಿದೆ. ಕಳೆದ ಕೆಲವು ವಾರಗಳಲ್ಲಿ ತೆರಿಗೆದಾರರ ಸಮಸ್ಯೆಗಳನ್ನು ಕ್ರಮೇಣವಾಗಿ ಪರಿಹರಿಸುವುದರೊಂದಿಗೆ ಪೋರ್ಟಲ್ ಬಳಕೆಯಲ್ಲಿ ನಿರಂತರ ಹೆಚ್ಚಳ ಕಂಡುಬಂದಿದೆ ಎಂದು ಇನ್ಫೋಸಿಸ್ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.
ಇಲ್ಲಿಯವರೆಗೆ 3 ಕೋಟಿಗೂ ಹೆಚ್ಚು ತೆರಿಗೆದಾರರು ಪೋರ್ಟಲ್‌ಗೆ ಲಾಗ್ ಇನ್ ಆಗಿದ್ದಾರೆ ಮತ್ತು ವಿವಿಧ ವಹಿವಾಟುಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದಾರೆ. ಕೋಟ್ಯಂತರ ತೆರಿಗೆದಾರರು ಯಶಸ್ವಿಯಾಗಿ ವಹಿವಾಟು ನಡೆಸುವುದರೊಂದಿಗೆ ಪೋರ್ಟಲ್ ನಿರಂತರ ಪ್ರಗತಿಯನ್ನು ಸಾಧಿಸಿದರೂ ಕೆಲವು ಬಳಕೆದಾರರು ಅನುಭವಿಸುತ್ತಿರುವ ತೊಂದರೆಗಳನ್ನು ಕಂಪನಿ ಗಮಸಿದೆ. ಬಳಕೆದಾರರ ಅನುಭವವನ್ನು ಮತ್ತಷ್ಟು ಸುಗಮಗೊಳಿಸಲು ಆದಾಯ ತೆರಿಗೆ ಇಲಾಖೆಯ ಸಹಯೋಗದೊಂದಿಗೆ ತ್ವರಿತಗತಿಯಲ್ಲಿ ಕೆಲಸ ಮಾಡುತ್ತಿದೆ ಎಂದಿದೆ.
ಸೆಪ್ಟೆಂಬರ್ ತಿಂಗಳಲ್ಲಿ ಸರಾಸರಿ, 15 ಲಕ್ಷಕ್ಕೂ ಹೆಚ್ಚು ಅನನ್ಯ ತೆರಿಗೆದಾರರು ಪೋರ್ಟಲ್‌ಗೆ ಲಾಗಿನ್ ಆಗಿದ್ದಾರೆ ಮತ್ತು ಇಲ್ಲಿಯವರೆಗೆ 1.5 ಕೋಟಿಗೂ ಹೆಚ್ಚು ರಿಟರ್ನ್‌ಗಳನ್ನು ಸಲ್ಲಿಸಲಾಗಿದೆ. ತಮ್ಮ ರಿಟರ್ನ್ಸ್ ಸಲ್ಲಿಸಿದ ಶೇ 85 ಪ್ರತಿಶತಕ್ಕಿಂತ ಹೆಚ್ಚು ತೆರಿಗೆದಾರರು ತಮ್ಮ ಇ-ಪರಿಶೀಲನೆಯನ್ನು ಪೂರ್ಣಗೊಳಿಸಿದ್ದಾರೆ ಎಂದು ಸಂಸ್ಥೆ ತಿಳಿಸಿದೆ.
ಹೆಚ್ಚಾಗಿ ಆಧಾರ್ ಒಟಿಪಿ ಮೂಲಕ ಪೋರ್ಟಲ್ ಪ್ರತಿದಿನ 2.5 ಲಕ್ಷಕ್ಕೂ ಹೆಚ್ಚು ರಿಟರ್ನ್ಸ್ ಫೈಲಿಂಗ್‌ಗೆ ಅನುಕೂಲ ಮಾಡಿಕೊಟ್ಟಿದ್ದೇವೆ ಮತ್ತು ಐಟಿಆರ್ 1, 2, 3, 4, 5, ಮತ್ತು 7 ಈಗ ಫೈಲಿಂಗ್‌ಗೆ ಲಭ್ಯವಿದೆ. 15ಜಿ, 15ಹೆಚ್, ಈಕ್ಯು 1, 10ಎ , 10ಇ , 10ಐಇ , ಡಿ.ಟಿ.ಎಸ್.ವಿ, 15ಸಿಎ, 15ಸಿಬಿ, 35 ಹಾಗೂ ಟಿ.ಡಿ.ಎಸ್ ರಿಟರ್ನ್ಸ್‌ಗಳಂತಹ ಹಲವಾರು ಪ್ರಕ್ರಿಯೆಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಸಲ್ಲಿಸಲಾಗುತ್ತಿದೆ ಎಂದು ಮಾಹಿತಿ ನೀಡಿದೆ.
11.5 ಲಕ್ಷಕ್ಕೂ ಹೆಚ್ಚು ಶಾಸನಬದ್ಧ ನಮೂನೆಗಳು ಮತ್ತು 8 ಲಕ್ಷಕ್ಕೂ ಅಧಿಕ ಟಿಡಿಎಸ್ ರಿಟರ್ನ್‌ಗಳನ್ನು ಈಗಾಗಲೇ ಸಲ್ಲಿಸಲಾಗಿದೆ. ತೆರಿಗೆದಾರರ ಸೇವೆಗಳಾದ ಇ-ಪ್ರೊಸೀಡಿಂಗ್ಸ್ ಸೂಚನೆಗಳು ಮತ್ತು ಪ್ರತಿಕ್ರಿಯೆ, ಇ-ಪ್ಯಾನ್ ಸೇವೆಗಳು, ಡಿಎಸ್ಸಿ ನೋಂದಣಿಗಳು ಮತ್ತು ಕಾನೂನುಬದ್ಧ ಉತ್ತರಾಧಿಕಾರಿಗಳಿಗೆ ಕಾರ್ಯಕ್ಷಮತೆಯನ್ನು ಸಹ ಸಕ್ರಿಯಗೊಳಿಸಲಾಗಿದೆ. 16.6 ಲಕ್ಷಕ್ಕೂ ಹೆಚ್ಚು ಇ-ಪ್ಯಾನ್‌ಗಳನ್ನು ಹಂಚಿಕೆ ಮಾಡಲಾಗಿದೆ. 4.3 ಲಕ್ಷ ಡಿಎಸ್‌ಸಿ ನೋಂದಣಿಗಳು ಮತ್ತು 3.44 ಲಕ್ಷಕ್ಕೂ ಹೆಚ್ಚು ಇ-ಪ್ರೊಸೀಡಿಂಗ್ ಪ್ರತಿಕ್ರಿಯೆಗಳು ಪೂರ್ಣಗೊಂಡಿದೆ ಎಂದು ಸಂಸ್ಥೆ ಹೇಳಿದೆ.
ಇನ್ಫೋಸಿಸ್ ಕೆಲವು ಬಳಕೆದಾರರು ಎದುರಿಸುತ್ತಿರುವ ಸವಾಲುಗಳನ್ನು ಗುರುತಿಸುತ್ತದೆ ಮತ್ತು 1200 ಕ್ಕೂ ಹೆಚ್ಚು ತೆರಿಗೆದಾರರೊಂದಿಗೆ ನೇರವಾಗಿ ಅವರ ಕಾಳಜಿಯನ್ನು ಅರ್ಥಮಾಡಿಕೊಳ್ಳಲು ತೊಡಗಿಸಿಕೊಂಡಿದೆ. ಚಾರ್ಟರ್ಡ್ ಅಕೌಂಟೆಂಟ್ ಸಮುದಾಯದೊಂದಿಗೆ ನಿಕಟವಾಗಿ ಕೆಲಸ ಮಾಡುವಾಗ ಕಂಪನಿಯು ಈ ಸವಾಲುಗಳನ್ನು ಶೀಘ್ರವಾಗಿ ಪರಿಹರಿಸುವತ್ತ ಗಮನಹರಿಸಿದೆ. ಇನ್ಫೋಸಿಸ್ ತ್ವರಿತ ಪ್ರಗತಿ ಸಾಧಿಸಲು ಬದ್ಧವಾಗಿದೆ ಮತ್ತು ಪ್ರಸ್ತುತ 750 ಕ್ಕೂ ಹೆಚ್ಚು ಸಂಪನ್ಮೂಲಗಳನ್ನು ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳ ಸಹಯೋಗದೊಂದಿಗೆ ಮಹತ್ವದ ಕೆಲಸಗಳನ್ನು ಪೂರ್ಣಗೊಳಿಸಲು ಯೋಜನೆಯನ್ನು ಮೀಸಲಿಟ್ಟಿದೆ. ಇನ್ಫೋಸಿಸ್ ಭಾರತ ಸರ್ಕಾರದೊಂದಿಗೆ ಪಾಲುದಾರಿಕೆ ಹೊಂದುವಲ್ಲಿ ಹೆಮ್ಮೆ ಪಡುತ್ತದೆ. ದೇಶದ ತಂತ್ರಜ್ಞಾನ ಸಾಮರ್ಥ್ಯಗಳ ಡಿಜಿಟಲ್ ವಿಕಸನವನ್ನು ವೇಗಗೊಳಿಸಲು ವಿವಿಧ ಇಲಾಖೆಗಳೊಂದಿಗೆ ನಿಕಟವಾಗಿ ಕೆಲಸ ಮಾಡುತ್ತಿದೆ ಎಂದು ಸ್ಪಷ್ಟನೆ ನೀಡಿದೆ.