ಸಕಾಲಕ್ಕೆ ಮಳೆ ಆಗದ ಹಿನ್ನೆಲೆ ಬಾಗಲಕೋಟೆ ಜಿಲ್ಲೆಯಲ್ಲಿ ನೀರಿನ ಬರ ಎದುರಾಗುವ ಆತಂಕ ಹೆಚ್ಚಿದೆ. ಜಿಲ್ಲೆಯಲ್ಲಿ ಘಟಪ್ರಭಾ ನದಿ ಒಡಲು ಬತ್ತಿದ್ದು, ಆಲಮಟ್ಟಿ ಹಿನ್ನೀರಿನ ಪ್ರದೇಶ ಈಗ ನೀರಿಲ್ಲದೆ ಖಾಲಿ ಖಾಲಿಯಾಗಿದೆ.ಮಳೆ ಬಾರದೆ ಜನಸಾಮಾನ್ಯರು, ಪ್ರಾಣಿಗಳು ಪರದಾಡುವಂತಾಗಿದೆ. ಜಿಲ್ಲೆಯಾದ್ಯಂತ ನದಿಗಳು, ಹಳ್ಳ ಕೊಳ್ಳಗಳು ಬತ್ತಿವೆ.. ಹೀಗೆ ಮುಂದುವರೆದರೆ ಜನರಿಗೆ ಒಂದು ಗುಟುಕು ನೀರು ಸಿಗುವುದೂ ಸಹ ಕಷ್ಟವಾಗುತ್ತದೆ.. ಜಿಲ್ಲಾಡಳಿತ ಮುಂಜಾಗ್ರತೆ ಕ್ರಮಗಲನ್ನು ಕೈಗೊಂಡು ಜನರ ನೀರಿನ ದಾಹವನ್ನು ತೀರಿಸಬೇಕಿದೆ.