ನಾನು ಕೇವಲ ಮುಖವಾಣಿ ಮಾತ್ರ -ಪಾಕ್ ಪರ ಘೋಷಣೆ ಕೂಗಿದ ಅಮೂಲ್ಯಳಿಂದ ಶಾಕಿಂಗ್ ಹೇಳಿಕೆ

ಶುಕ್ರವಾರ, 21 ಫೆಬ್ರವರಿ 2020 (11:10 IST)
ಬೆಂಗಳೂರು : ಪಾಕ್ ಪರ ಅಮೂಲ್ಯ ಘೋಷಣೆ ಕೂಗಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನಾನು ಕೇವಲ ಮುಖವಾಣಿ ಮಾತ್ರ. ಇದನ್ನ ಹೇಳಿಕೊಡುವ ತಂಡ ಬೇರೆಯೇ ಇದೆ ಎಂದು ಆರೋಪಿ ಅಮೂಲ್ಯ ಅಚ್ಚರಿಯ ಹೇಳಿಕೆ ನೀಡಿದ್ದಾಳೆ.


ಸಂದರ್ಶನವೊಂದರಲ್ಲಿ ಮಾತನಾಡಿದ ಅಮೂಲ್ಯ, ‘ನನ್ನ ಹಿಂದೆ ಸಲಹಾ ಸಮಿತಿ ಕೆಲಸ ಮಾಡುತ್ತಿದೆ. ಅವರು ನನಗೆ ಮಾತನಾಡಲು ವಿಷಯ ಕೊಡುತ್ತಾರೆ. ಇವತ್ತಿನ ಭಾಷಣ ಈ ಬಗ್ಗೆ ಮಾತಾಡಬೇಕು ಅಂತಾರೆ. ಸಾಕಷ್ಟು ಕಾರ್ಯಕರ್ತರು ಸಲಹೆ ನೀಡುತ್ತಾರೆ. ಅಪ್ಪ ಅಮ್ಮ ಕೂಡ ಇದನ್ನ ಮಾತನಾಡು ಅಂತಾರೆ. ಒಂದು ದೊಡ್ಡ ವಿದ್ಯಾರ್ಥಿ ಸಮೂಹವೇ ಇದೆ ಎಂದು ಹೇಳಿದ್ದಾಳೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ