ನಮ್ಮಿಬ್ಬರಲ್ಲಿರುವ ಈ ಸಮಸ್ಯೆ ಗರ್ಭಧಾರಣೆಯಾಗದಿರಲು ಕಾರಣವೇ?

ಶುಕ್ರವಾರ, 21 ಫೆಬ್ರವರಿ 2020 (06:37 IST)
ಬೆಂಗಳೂರು : ಪ್ರಶ್ನೆ : ನನಗೆ 33 ವರ್ಷ. ನನ್ನ ಹೆಂಡತಿಗೆ 29 ವರ್ಷ. ನಾವು ಮದುವೆಯಾಗಿ 3 ವರ್ಷಗಳಾಗಿವೆ. ಆದರೆ ನನ್ನ ಪತ್ನಿ ಗರ್ಭಿಣಿಯಾಗಲು ಸಾಧ್ಯವಾಗುತ್ತಿಲ್ಲ. ನಾವು ಸ್ರ್ತೀರೋಗ ತಜ್ಞರನ್ನು ಭೇಟಿ ಮಾಡಿ ಅಗತ್ಯ ಪರೀಕ್ಷೆಗಳನ್ನು ಮಾಡಿದ್ದೇವೆ. ನನ್ನ ಪತ್ನಿ ದೀರ್ಘಕಾಲದ ಮೂತ್ರದ ಸೋಂಕಿನಿಂದ ಬಳಲುತ್ತಿದ್ದಾಳೆ. ನಾನು ಮದುವೆಗೆ ಮುಂಚೆ ನಿಯಮಿತವಾಗಿ ಹಸ್ತಮೈಥುನ ಮಾಡಿಕೊಳ್ಳುತ್ತಿದ್ದೆ. ಇದಕ್ಕೆ ನಮ್ಮಲ್ಲಿರುವ ಈ ಸಮಸ್ಯೆಗಳೇ ಕಾರಣವಾ?


ಉತ್ತರ :  ಹಸ್ತಮೈಥುನವು ಭವಿಷ್ಯದ ಗರ್ಭಧಾರಣೆಯ ಮೇಲೆ ಪರಿಣಾಮ ಬೀರುವುದಿಲ್ಲ. ಮೂತ್ರ ಸೋಂಕಿನ ಸಮಸ್ಯೆಗೆ ಚಿಕಿತ್ಸೆ ನೀಡುವ ಅವಶ್ಯಕತೆಯಿದೆ. ನೀವು ವೀರ್ಯ ಪರೀಕ್ಷೆಯನ್ನು ತಪ್ಪದೇ ಮಾಡಿಸಿ. ಹಾಗೇ ಆಕೆಯ ಋತುಚಕ್ರದ 10,12, 14, ಮತ್ತು 16 ನೇ ದಿನಗಳಲ್ಲಿ ತಪ್ಪದೇ ಸಂಭೋಗ ಮಾಡಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ