ಮಕ್ಕಳ ಎದುರಲ್ಲೇ ಶಿಕ್ಷಕಿಯನ್ನು ಕೊಂದ ಪಾಪಿ

ಮಂಗಳವಾರ, 23 ಜುಲೈ 2019 (16:17 IST)

ತರಗತಿಯಲ್ಲಿ ಪಾಠ ಮಾಡುತ್ತಿರುವಾಗಲೇ ಶಿಕ್ಷಕಿಯನ್ನು ಕೊಲೆ ಮಾಡಿರುವ ಘಟನೆ ನಡೆದಿದೆ.

ಘಟನೆಯಲ್ಲಿ ಶಿಕ್ಷಕಿ ರತಿದೇವಿ (35) ಕೊಲೆಗೀಡಾಗಿದ್ದಾರೆ. ಈಕೆಯ ಪತಿ ಗುರುಮುನೇಶ್ವರನ್ ಕೊಲೆ ಮಾಡಿದ ಪಾಪಿಯಾಗಿದ್ದಾನೆ.

ಮಕ್ಕಳಿಗೆ ತರಗತಿಯಲ್ಲಿ ಪಾಠ ಮಾಡುತ್ತಿರುವಾಗಲೇ ಆರೋಪಿಯು ತನ್ನ ಪತ್ನಿಯಾಗಿರುವ ರತಿದೇವಿಯನ್ನು ಚಾಕುವಿನಿಂದ ತಿವಿದು ಕೊಲೆ ಮಾಡಿದ್ದಾನೆ.

ತಮಿಳುನಾಡಿನ ತಿರುಮಂಗಲಂ ಪ್ರದೇಶದಲ್ಲಿ ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ಈ ಘಟನೆ ನಡೆದಿದ್ದು, ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

 

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ