ಪ್ರೀಯಕರನಿಗಾಗಿ ಪತಿಯ ಹತ್ಯೆಗೆ ಸ್ಕೆಚ್
ಲವ್ವರ್ಗಾಗಿ ಪತಿಯನ್ನೆ ಮುಗಿಸಲು ಸಂಚು ಮಾಡಿದ್ದ ಮಡದಿ ಈಗ ಪೋಲಿಸರ ಬಲೆಗೆ ಬಿದ್ದಿದ್ದಾಳೆ.ಅನುಪಲ್ಲವಿ ಹಾಗೂ ನವೀನ್ ಕುಮಾರ್ ವಿವಾಹ ವಾಗಿ ಚೆನ್ನಾಗಿಯೇ ಜೀವನ ಮಾಡುತ್ತಿದ್ದರು ಇವರ ಮಧ್ಯೆ ಎಂಟ್ರಿ ಕೊಟ್ಟ ಹಿಮಂತನ ಮೋಹಕ್ಕೆ ಬಿದ್ದ ಅನುಪಲ್ಲವಿ ಗಂಡನನ್ನು ಹತ್ಯೆ ಮಾಡಲು ಪ್ಲಾನ್ ಮಾಡಿದ್ಲು,, ಇದರಂತೆ ಪ್ರೀ ಯಕರ ತಮಿಳುನಾಡಿನಲ್ಲಿರುವ ತನ್ನ ಸ್ನೇಹಿತರಿಗೆ ಸುಪಾರಿ ಕೊಟ್ಟಿರುತ್ತಾನೆ. ಅದರಂತೆ ಅವರು ಕೂಡ ನವೀನ್ ನನ್ನ ಕೊಲೆ ಮಾಡಲು ಮುಂದಾಗುತ್ತಾರೆ. ಆದ್ರೇ ಕೊನೆಯ ಕ್ಷಣದಲ್ಲಿ ಭಯ ತಗೊಂಡು ಒಂದು ಮಾಸ್ಟರ್ ಪ್ಲಾನ್ ಮಾಡಿ ನವೀನ್ ಗೆ ಕಂಠ ಪೂರ್ತಿ ಕುಡಿಸಿ, ಆತನ ಮೇಲೆ ರೆಡ್ ಕಲರ್ ಸಾಸ್ ಹಾಕಿ ಕೊಲೆ ಮಾಡಿರೋದಾಗಿ ಹೇಳಿ ಪ್ರೀಯಕರ ಹಿಮಂತನಿಗೆ ಫೊಟೋ ಕಳುಹಿಸುತ್ತಾರೆ ,ಫೋಟೋ ನೋಡಿ ಭಯಗೊಂಡ ಹಿಮಂತ್ ಹೆದರಿ ಆತ್ಮಹತ್ಯೆ ಮಾಡಿಕೊಳ್ಳುತ್ತಾನೆ .ಮೃತನ ಮನೆಯರ ನೀಡಿದ ದೂರಿನ ಮೇರೆಗೆ ಪೀಣ್ಯ ಪೊಲೀಸರು ತನಿಖೆ ಮಾಡಿದಾಗ ಕೃತ್ಯಕ್ಕೆ ಸಹಕಾರ ನೀಡಿದ್ದ ಹರೀಶ್, ಅಮ್ಮಜಮ್ಮ, ಮುಗಿಲನ್ ಸೇರಿ ಐವರನ್ನ ಅರೆಸ್ಟ್ ಮಾಡಿ ತನಿಖೆ ಕೈಗೊಂಡಿದ್ದಾರೆ.