Namma Metro: ನಮ್ಮ ಮೆಟ್ರೋ ಪ್ರಯಾಣ ಸಮಯದಲ್ಲಿ ನಾಳೆ ಸಣ್ಣ ಬದಲಾವಣೆ
ಸಾಮಾನ್ಯವಾಗಿ ನಮ್ಮ ಮೆಟ್ರೋ ಸೇವೆ ಬೆಳಿಗ್ಗೆ 6 ಗಂಟೆಯಿಂದ ಆರಂಭವಾಗುತ್ತದೆ. ಆದರೆ ನಾಳೆ ಒಂದು ದಿನ ಮಾತ್ರ ಬೆಳ್ಳಂ ಬೆಳಿಗ್ಗೆ 3.30ಕ್ಕೇ ಮೆಟ್ರೋ ಸೇವೆ ಆರಂಭವಾಗಲಿದೆ ಎಂದು ಬಿಎಂಆರ್ ಸಿಎಲ್ ಪ್ರಕಟಣೆ ತಿಳಿಸಿದೆ. ಇದಕ್ಕೆ ಕಾರಣವೂ ಇದೆ.
ನಾಳೆ ಅಂದರೆ ಏಪ್ರಿಲ್ 27 ರಂದು ಟಿಸಿಎಸ್ ವರ್ಲ್ಡ್ 10ಕೆ -2025 ಮ್ಯಾರಥಾನ್ ಆಯೋಜಿಸಲಾಗಿದೆ. ಈ ಕಾರಣಕ್ಕೆ ಮ್ಯಾರಥಾನ್ ನಲ್ಲಿ ಬೆಂಗಳೂರಿನ ವಿವಿಧ ಭಾಗಗಳ ಜನರು ಭಾಗಿಯಾಗಲು ಅನುಕೂಲವಾಗುವಂತೆ ಮೆಟ್ರೋ ಸಮಯದಲ್ಲಿ ಬದಲಾವಣೆ ಮಾಡಲಾಗಿದೆ.
ಈ ವಿಸ್ತೃತ ಅವಧಿಯಲ್ಲಿ 12 ನಿಮಿಷಕ್ಕೊಮ್ಮೆ ನಾಲ್ಕು ಮೆಟ್ರೋ ರೈಲುಗಳು ಮೆಜೆಸ್ಟಿಕ್ ಮೆಟ್ರೋ ನಿಲ್ದಾಣದಿಂದ ಸಂಚಾರ ನಡೆಸಲಿದೆ. ನಾಳೆ ಒಂದೇ ದಿನ ಈ ವಿಶೇಷ ಬದಲಾವಣೆಯಿರಲಿದೆ.