ಕ್ಲಾಸ್ ರೂಂನಲ್ಲಿಯೇ ಶಿಕ್ಷಕರಿಗೆ ಆವಾಜ್ ಹಾಕಿದ ವಿದ್ಯಾರ್ಥಿ

ಶುಕ್ರವಾರ, 18 ಜನವರಿ 2019 (06:06 IST)
ಬೆಂಗಳೂರು : ಒಂದು ಕಾಲದಲ್ಲಿ ಶಿಕ್ಷಕರನ್ನು ನೋಡಿ ಹೆದರುತ್ತಿದ್ದ ವಿದ್ಯಾರ್ಥಿಗಳು ಇತ್ತೀಚಿನ ದಿನಗಳಲ್ಲಿ  ಕ್ಲಾಸ್ ರೂಂನಲ್ಲಿಯೇ ಶಿಕ್ಷಕರಿಗೆ ಆವಾಜ್ ಹಾಕುವ ಮಟ್ಟಕ್ಕೆ ಬೆಳೆದಿದ್ದಾರೆ. ಇಂತಹದೊಂದು ಘಟನೆ ಉತ್ತರ ಕರ್ನಾಟಕ ಭಾಗದ ಶಾಲೆಯೊಂದರಲ್ಲಿ ನಡೆದಿದೆ.


ಹೌದು. ಉತ್ತರ ಕರ್ನಾಟಕ ಭಾಗದ ಶಾಲೆಯೊಂದರಲ್ಲಿ ಕ್ಲಾಸ್ ರೂಮಿನಲ್ಲಿ ವಿದ್ಯಾರ್ಥಿಯೊಬ್ಬ ಎಲ್ಲರ ಮುಂದೆ ತನ್ನ ಟೀಚರ್ ಗೆ ಆವಾಜ್ ಹಾಕಿ ಗೂಂಡಾಗಿರಿ ಮಾಡಿದ್ದಾನೆ. ಇದನ್ನು ಕ್ಲಾಸ್ ರೂಂನಲ್ಲಿದ್ದ ಆತನ ಸಹಪಾಠಿಗಳು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ.


ಈ ವಿಡಿಯೋ ಇದೀಗ ವೈರಲ್ ಆಗಿದ್ದು, ವಿದ್ಯಾರ್ಥಿ ತನ್ನ ಶಿಕ್ಷಕಿಯ ಜೊತೆ ನಡೆದುಕೊಂಡ ವರ್ತನೆಗೆ ವ್ಯಾಪಕ ಟೀಕೆ ವ್ಯಕ್ತವಾಗಿದೆ. ಅಲ್ಲದೇ ವಿದ್ಯಾರ್ಥಿಯ ವಿರುದ್ಧ ಕ್ರಮ ಕೈಗೊಳ್ಳುವಂತೆ ಸಾರ್ವಜನಿಕ ಶಿಕ್ಷಣ ಇಲಾಖೆಗೂ ವಿಡಿಯೋ ರವಾನಿಸಲಾಗಿದೆ ಎನ್ನಲಾಗಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ