ಆಸ್ಟ್ರೇಲಿಯಾದ ವಿದ್ಯಾರ್ಥಿನಿಯರು ರಾಜ್ಯದ ಬೀದಿನಾಯಿಗಳಿಗೆ ರೇಬೀಸ್ ಹಾಕುವ ಮೂಲಕ ಗಮನ ಸೆಳೆಯುತ್ತಿದ್ದಾರೆ.
ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ತಾಲೂಕಿನ ಹಂಗಳ ಮತ್ತು ದೇವರಹಳ್ಳಿ ಗ್ರಾಮದ ಸುತ್ತ ಇರುವ ಬೀದಿ ನಾಯಿಗಳಿಗೆ ರೇಬೀಸ್ ಕಾಯಿಲೆ ಹರಡದಂತೆ ಚುಚ್ಚು ಮದ್ದು ನೀಡಲಾಯಿತು.
ತಮಿಳುನಾಡಿನ ಊಟಿಯ ಪ್ರಸಿದ್ಧ ಕಾಲೇಜಿನ ವಿದ್ಯಾರ್ಥಿನಿಯರಾದ ಆಸ್ಟ್ರೇಲಿಯಾದ ಸ್ಟೆಪಿ ಹಾಗೂ ಟೆಸ್ಸಿ ಎಂಬ ವಿದ್ಯಾರ್ಥಿನಿಯರು ಗ್ರಾಮದ ಬೀದಿ ನಾಯಿಗಳಿಗೆ ರೇಬೀಸ್ ಲಸಿಕೆಯನ್ನು ಹಾಕುವುದರಲ್ಲಿ ನಿರತರಾಗಿದ್ದರು.
ಈ ಸಮಯದಲ್ಲಿ ಭಾರತದ ಬಗ್ಗೆ ಗೌರವಪೂರ್ವಕ ಅಭಿನಂದನೆಗಳನ್ನು ಸಲ್ಲಿಸಿದ ಇಬ್ಬರು ವಿದ್ಯಾರ್ಥಿನಿಯರು, ಭಾರತದಲ್ಲಿ ಬಂದು ವ್ಯಾಸಂಗ ಮಾಡುತ್ತಿರುವುದು ನಮಗೆ ತುಂಬಾ ಸಂತೋಷವಾಗುತ್ತಿದೆ.
ಭಾರತೀಯರ ಸಂಸ್ಕೃತಿ ನಮಗೆ ತುಂಬಾ ಖುಷಿ ನೀಡುತ್ತಿದೆ. ಇಂದು ನಾವು ಕೈಗೊಂಡಿರುವ ಕೆಲಸ ನಮಗೆ ತುಂಬಾ ಖುಷಿಯನ್ನು ಕೊಡುತ್ತಿದೆ ಎಂದು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.