ಶೀಲ ಶಂಕಿಸಿ ಪತ್ನಿಯನ್ನು ಭೀಕರವಾಗಿ ಕೊಂದ ಶಿಕ್ಷಕ!

ಶನಿವಾರ, 18 ಫೆಬ್ರವರಿ 2023 (11:38 IST)
ಕಲಬುರಗಿ : ಶೀಲವನ್ನು ಶಂಕಿಸಿ ವ್ಯಕ್ತಿಯೊಬ್ಬ ತನ್ನ ಪತ್ನಿಯನ್ನು ಭೀಕರವಾಗಿ ಹತ್ಯೆ ಮಾಡಿದ ಘಟನೆ ಕಲಬುರಗಿ ನಗರದ ಅಂಬಿಕಾ ಕಾಲೋನಿಯಲ್ಲಿ ನಡೆದಿದೆ.

ನಗರದ ಅಂಬಿಕಾ ಕಾಲೋನಿಯ ಫರೀದಾ ಬೇಗಂ (39) ಪತಿ ಎಜಾಜ್ ಅಹ್ಮದ್ನಿಂದ ಕೊಲೆಯಾದ ದುರ್ದೈವಿ. ಕಳೆದ 13 ವರ್ಷದ ಹಿಂದೆ ಈಕೆಯ ಜೊತೆಗೆ ವಿವಾಹ ಆಗಿದ್ದ ಅಹ್ಮದ್, ರಾತ್ರಿ ವೇಳೆ ಮನೆಯಲ್ಲಿ ಮಲಗಿದ್ದ ಸಂದರ್ಭದಲ್ಲಿ ತಲೆಯ ಮೇಲೆ ಕಲ್ಲು ಎತ್ತಿ ಹಾಕಿ ಭೀಕರವಾಗಿ ಕೊಲೆ ಮಾಡಿದ್ದಾನೆ.

ಅನೈತಿಕ ಸಂಬಂಧ ಹಾಗೂ ವರದಕ್ಷಿಣೆ ಕಿರುಕುಳ ಆರೋಪದ ಹಿನ್ನೆಲೆಯಲ್ಲಿ ಕೊಲೆ ಮಾಡಿದ್ದಾನೆ ಎಂದು ಪ್ರಾಥಮಿಕ ವರದಿಯಲ್ಲಿ ತಿಳಿದುಬಂದಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ