ಬೆಳಗಾವಿಯಿಂದ ಮುಂಬೈಗೆ ಹೊರಟಿದ್ದ ವಿಮಾನದಲ್ಲಿ ತಾಂತ್ರಿಕ ದೋಷ, ಪೈಲೆಟ್‌ ಸಮಯ ಪ್ರಜ್ಞೆ ತಪ್ಪಿಸಿತು ದೊಡ್ಡ ದುರಂತ

Sampriya

ಶನಿವಾರ, 16 ಆಗಸ್ಟ್ 2025 (16:49 IST)
Photo Credit X
ಬೆಳಗಾವಿ: ಬೆಳಗಾವಿಯಿಂದ ಮುಂಬೈಗೆ ಹೊರಟಿದ್ದ ಸ್ಟಾರ್ ಏರ್ ವಿಮಾನದಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡ ಬೆನ್ನಲ್ಲೇ ವಿಮಾನವನ್ನು ಬೆಳಗಾವಿ ಏರ್‌ಪೋರ್ಟ್‌ನಲ್ಲೇ ತುರ್ತು ಭೂಸ್ಪರ್ಶ ಮಾಡಲಾಗಿದೆ.

ಸ್ಟಾರ್ ಏರ್‌ನ S5111 ಸಂಖ್ಯೆಯ ವಿಮಾನದ ಇಂಜಿನ್‌ನಲ್ಲಿ ದೋಷ  ಕಂಡುಬಂದ ಹಿನ್ನೆಲೆ ತುರ್ತು ಭೂಸ್ಪರ್ಶ ಮಾಡಲಾಗಿದೆ. ಅದೃಷ್ಟವಶಾತ್‌ ದೊಡ್ಡ ಅವಘಡದಿಂದ ಪಾರಾಗಿದ್ದು, ಯಾವುದೇ ಅನಾಹುತ ಸಂಭವಿಸಿಲ್ಲ. 

ವಿಮಾನದಲ್ಲಿ ಅಜಯ್ ಸುತಾರ್, ವೈಷ್ಣವ್‌ ಶಾನಭಾಗ, ನಾರಾಯಣ ಡೆಲ್ ಸೇರಿದಂತೆ ಸುಮಾರು 41 ಮಂದಿ ಪ್ರಯಾಣಿಕರಿದ್ದರು. ಟೇಕಾಫ್ ಆದ ಕ್ಷಣದಲ್ಲೇ ತಾಂತ್ರಿಕ ದೋಷ ಕಂಡುಬಂದ ಹಿನ್ನೆಲೆ ಎಚ್ಚೆತ್ತ ಪೈಲಟ್‌ ಕೂಡಲೇ ವಿಮಾನವನ್ನ ತುರ್ತು ಭೂಸ್ಪರ್ಶ ಮಾಡಿಸಿದ್ದಾರೆ. 

ಒಟ್ಟಿನಲ್ಲಿ ಕುಂದಾನಗರಿ ಬೆಳಗಾವಿಯಲ್ಲಿ ಭಾರೀ ಅನಾಹುತವೊಂದು ತಪ್ಪಿದಂತಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ