ಬೆಂಗಳೂರಿನಲ್ಲಿ ಟೊಮ್ಯಾಟೊ ಸಾಗಿಸುತ್ತಿದ್ದ ವಾಹನ ಕಿಡ್ನ್ಯಾಪ್
ಮಂಗಳವಾರ, 11 ಜುಲೈ 2023 (18:47 IST)
ದುಡ್ಡು, ಚಿನ್ನಭರಣ, ಬೆಲೆಬಾಳುವ ವಸ್ತುಗಳನ್ನು ಕಳವು ಮಾಡೋದು ನೋಡಿದ್ರಿ, ಆದ್ರೆ ಈಗ ರೈತರು ಬೆಳೆಯೋ ಹಣ್ಣು ತರಕಾರಿಗಳನ್ನು ಕೂಡ ಕಳವು ಮಾಡೋವ ಪರಿಸ್ಥಿತಿ ಬಂದಿದೆ.. ಹೇಳಿ ಕೇಳಿ ಟೊಮ್ಯಾಟೊ ಗೆ ಈಗ ಚಿನ್ನದ ಬೆಲೆ.. ಮಾರ್ಕೆಟ್ ಗಳಲ್ಲಿ ಟೊಮ್ಯಾಟೊ ರೇಟು ಕೇಳಿದ ಜನ ತಲೆ ತಿರುಗಿ ಬಿಳೋ ಪರಿಸ್ಥಿತಿ.. ಕೆಜಿ ಟೊಮ್ಯಾಟೊ ಗೆ ನೂರ ಇಪ್ಪತ್ತು ತನಕ ರೇಟಿದೆ.. ಟೊಮ್ಯಾಟೊ ಬೆಳೆದ ರೈತರ ಜಮೀನನಲ್ಲೇ ಕಳ್ಳರು ಟೊಮ್ಯಾಟೊ ಕದಿತೀದ್ದಾರೆ.. ಅದಕ್ಕೆ ತಾಜಾ ಉದಾಹರಣೆ ಅಂದರೆ ಶನಿವಾರ ರಾತ್ರಿ ಬೆಂಗಳೂರಿನ ಆರ್ ಎಮ್ ಸಿ ಯಾರ್ಡ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿರೋ ಟೊಮ್ಯಾಟೊ ತುಂಬಿದ್ದ ವಾಹನ ಕಳ್ಳತನ.
ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆಯ ರೈತರಾದ ರಾಜಣ್ಣ , ತಿಮ್ಮಯ್ಯ ಅನ್ನೋರು ತಮ್ಮ ತೋಟದಲ್ಲಿ ಬೆಳೆದ ಟೊಮ್ಯಾಟೊ ಬೆಳೆದಿದ್ರು.. ಕೋಲಾರ ಮಾರ್ಕೆಟ್ ಗೆ ಹೋದ್ರೆ ಹೆಚ್ಚಿನ ಬೆಲೆ ಸಿಗುತ್ತೆ ಅಂತಾ ಬೊಲೆರೋ ವಾಹನದಲ್ಲಿ ಸುಮಾರು ಎರಡು ಟನ್ ಅಷ್ಟು ಟೊಮ್ಯಾಟೊ ವನ್ನು ಚಳ್ಳಕೆರೆ ಯಿಂದ ಕೋಲಾರ ಕ್ಕೆ ಸಾಗಿಸುತ್ತಿದ್ರು.. ಶನಿವಾರ ರಾತ್ರಿ ಸುಮಾರು ಹನ್ನೆರಡು ಗಂಟೆ ಹೊತ್ತಿಗೆ ಟೊಮ್ಯಾಟೊ ತುಂಬಿದ್ದ ಬೊಲೆರೋ ವಾಹನ ರಿಂಗ್ ರಸ್ತೆಯ ಬಿಇಎಲ್ ಸರ್ಕಲ್ ಹತ್ರ ಬಂದಿದೆ.. ಈ ವೇಳೆ ಹಿಂಬದಿಯಿಂದ ಬಂದ ಕಾರೊಂದು ಬೊಲೆರೋ ವಾಹನವನ್ನು ಅಡ್ಡಹಾಕಿತ್ತು.. ನಮಗೆ ಆಕ್ಸಿಡೆಂಟ್ ಮಾಡ್ಕೊಂಡು ಹಾಗೇ ಹೋಗ್ತಾ ಇದೀರಾ ಅಂತಾ ಗಲಾಟೆ ಶುರುಮಾಡಿದ್ರು.. ಆಕ್ಸಿಡೆಂಟ್ ಗೆ ಪರಿಹಾರ ವಾಗಿ ಹತ್ತು ಸಾವಿರ ಹಣ ಕಟ್ಟಿಕೊಡಿ ಅಂತಾ ಜಗಳ ಮಾಡಿದ್ರು.. ಆದರೆ ರೈತರ ಬಳಿ ಅಷ್ಟು ಹಣವಿಲ್ಲದ ಕಾರಣಕ್ಕೆ ಇಬ್ಬರನ್ನು ತಮ್ಮ ಕಾರಿನಲ್ಲಿ ಕೂರಿಸಿಕೊಂಡು, ಟೊಮ್ಯಾಟೊ ಗಾಡಿಯನ್ನು ತಾವೇ ಡ್ರವ್ ಮಾಡ್ಕೊಂಡು ಹೊರಟಿದ್ರು.. ಹಾಗೇ ಹೋದವರು ಬೂದಿಗೆರೆ ಸಮೀಪದ ಅದೊಂದು ಜಾಗದಲ್ಲಿ ಇಬ್ಬರನ್ನು ಕಾರಿನಿಂದ ಕೆಳಗೆ ಇಳಿಸಿ ಟೊಮ್ಯಾಟೊ ತುಂಬಿದ್ದ ವಾಹನದ ಸಮೇತ ಎಸ್ಕೇಪ್ ಆಗಿದ್ದಾರೆ.ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಟೊಮ್ಯಾಟೊ ಕಳ್ಳರ ಬೆನ್ನುಬಿದ್ದಿದ್ದಾರೆ.. ಆದ್ರೆ ರೈತ ಬೆಳೆಯೋ ತರಕಾರಿಯನ್ನೂ ಕಳವು ಮಾಡ್ತಿರೋದು ನಿಜಕ್ಕೂ ಬೇಸರದ ಸಂಗತಿ