ರಾಜ್ಯದ ಸರ್ಕಾರಿ ಶಾಲೆಗಳಲ್ಲಿ 1 ರಿಂದ 10 ನೇ ತರಗತಿಯ 45,45,749 ವಿದ್ಯಾರ್ಥಿಗಳಿದ್ದಾರೆ.ಈಗಾಗಲೇ ಮಕ್ಕಳಿಗೆ ಒಂದು ಜೊತೆ ಸಿದ್ದಪಡಿಸಿದ ಸಮವಸ್ತ್ರ ಶಿಕ್ಷಣ ಇಲಾಖೆ ವಿತರಿಸಿದೆ.ಮಕ್ಕಳಿಗೆ 2 ನೇ ಜೊತೆ ಸಮವಸ್ತ್ರದ ಬಟ್ಟೆಯನ್ನು ಮಾತ್ರ ಇಲಾಖೆ ನೀಡಲಿದೆ.ಬಟ್ಟೆಯನ್ನು ಹೊಲಿಸುವ ವೆಚ್ಚವನ್ನು ಪೋಷಕರೇ ಭರಿಸಬೇಕು ಎಂದು ಶಾಲಾ ಶಿಕ್ಷಣ ಇಲಾಖೆ ಸುತ್ತೋಲೆ ಹೊರಡಿಸಿದೆ.ಹೊಲಿಕೆಯ ವೆಚ್ಚ ಅಂದಾಜು 600-700 ರೂ.ಗಳನ್ನು ಪೋಷಕರೇ ಭರಿಸಬೇಕು ಎಂದು ಶಿಕ್ಷಣ ಇಲಾಖೆ ಸುತ್ತೋಲೆಯಲ್ಲಿ ತಿಳಿಸಿದೆ.