ಮನೆಯೊಂದರಲ್ಲಿ ಕೊಳೆತ ಸ್ಥಿತಿಯಲ್ಲಿ ಮಹಿಳೆ ಶವ

ಮಂಗಳವಾರ, 7 ಫೆಬ್ರವರಿ 2023 (18:17 IST)
ವರ್ತೂರು ಪೊಲೀಸ್ ಠಾಣಾ ವ್ಯಾಪ್ತಿಯ ಪಂಚಮುಖಿ ದೇವಸ್ಥಾನ ರಸ್ತೆಯ ಮನೆಯೊಂದರಲ್ಲಿ ಕೊಳೆತ ಸ್ಥಿತಿಯಲ್ಲಿ ಮಹಿಳೆ ಶವ ಪತ್ತೆಯಾಗಿದೆ. ಹೆಂಡ್ತಿಯನ್ನ ಗಂಡನೇ‌ ಕೊಲೆ‌ ಮಾಡಿರುವ ಅನುಮಾನ ವ್ಯಕ್ತವಾಗಿದೆ.ಕೊಲ್ಕತ್ತಾ ಮೂಲದ ಮೊನಿಷ್ ಕತೂಮ್ ಎಂಬಾಕೆ ಕೊಲೆ‌ ಮಾಡಿದ ಆರೋಪದ‌ಡಿ ಪತಿ ಶೇಖ್ ಮಜಿದ್ ತಲೆಮರೆಸಿಕೊಂಡಿದ್ದು ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಗಾಗಿ ಬಲೆ ಬೀಸಿದ್ದಾರೆ.
 
ಕಳೆದ ಮೂರು ತಿಂಗಳ ಹಿಂದೆ ಬೆಂಗಳೂರಿಗೆ ಬಂದಿದ್ದ ದಂಪತಿ ವರ್ತೂರಿನಲ್ಲಿ ವಾಸವಾಗಿದ್ದರು. ಮಜೀದ್ ಟೈಲ್ಸ್ ಕೆಲಸ ಮಾಡುತ್ತಿದ್ದರೆ ಮೊನಿಷ್ ಗೃಹಿಣಿಯಾಗಿದ್ದಳು. ಇಬ್ಬರು ನಡುವೆ ಎಲ್ಲವೂ ಸರಿಯಾಗಿತ್ತು. ಈ ಮಧ್ಯೆ ಅವರಿಬ್ಬರ‌ ನಡುವೆ‌‌ ಏನಾಯಿತು ಗೊತ್ತಿಲ್ಲ..‌ಇಂದು ಕೊಳೆತ ಸ್ಥಿತಿಯಲ್ಲಿ ಮೊನಿಷಾ ಶವವಾಗಿ ಪತ್ತೆಯಾಗಿದ್ದಾಳೆ. 
 
ಕಳೆದ‌ ಎರಡು ದಿನಗಳಿಂದ ಲಾಕ್ ಆಗಿದ್ದ ಮನೆಯಿಂದ ದುರ್ವಾಸನೆ ಬಂದ ಹಿನ್ನೆಲೆಯಲ್ಲಿ‌ ನೆರೆಹೊರೆ ಮನೆಯವರು ಅನುಮಾನ ವ್ಯಕ್ತಪಡಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು ಮನೆ‌ಯ‌ ಕಿಟಕಿ ಓಪನ್ ಮಾಡಿ ನೋಡಿದಾಗ ಕೊಳೆತ ಸ್ಥಿತಿಯಲ್ಲಿ ಮಹಿಳೆ ಶವವಾಗಿರುವುದು ಬೆಳಕಿಗೆ ಬಂದಿದೆ. ಕುತ್ತಿಗೆ ಬಿಗಿದು ಸಾಯಿಸಿರುವುದು  ಕಂಡು ಬಂದಿದ್ದು ಮೃತದೇಹದ ಮೇಲೆ‌ ಗಾಯವಾಗಿರುವ ಗುರುತು ಇಲ್ಲ..ಸದ್ಯ ಕಾನೂನು‌ ಪ್ರಕ್ರಿಯೆ ಮುಗಿಸಿ ಮೃತದೇಹವನ್ನ ವೈದ್ಯಕೀಯ ಪರೀಕ಼ೆಗಾಗಿ ರವಾನಿಸಲಾಗಿದೆ. ಮೃತ‌ ಮಹಿಳೆ ಪತಿ ಮಜೀದ್ ನಾಪತ್ತೆಯಾಗಿದ್ದು  ಆತನ ಮೊಬೈಲ್‌ ಸ್ವಿಚ್ ಆಫ್‌ ಆಗಿರುವುದು ಕಂಡುಬಂದಿದೆ.‌ ಸದ್ಯ ಕೊಲೆ‌‌ ಪ್ರಕರಣ ದಾಖಲಿಸಿಕೊಂಡಿರುವ ಆರೋಪಿಗಾಗಿ ವಿಶೇಷ ತಂಡ ರಚಿಸಿ ಪೊಲೀಸರು ಬಲೆ ಬೀಸಿರುವುದಾಗಿ ವೈಟ್ ಫಿಲ್ಡ್ ವಿಭಾಗದ ಡಿಸಿಪಿ ಗಿರೀಶ್ ತಿಳಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ