ಯಲಹಂಕ- ಕೋಗಿಲು ಭಾಗದಲ್ಲಿ ಹಫ್ತಾ ವಸೂಲಿ ದಂಧೆ

ಮಂಗಳವಾರ, 7 ಫೆಬ್ರವರಿ 2023 (15:12 IST)
ಬೆಂಗಳೂರಿನಲ್ಲಿ ಮತ್ತೆ ನಟೋರಿಯಸ್ ರೌಡಿಶೀಟರ್ ಅನೀಸ್ ಅಹಮದ್ ಬಾಲ ಬಿಚ್ಚಿದ್ದಾರೆ.ಯಲಹಂಕ - ಕೋಗಿಲು‌ ಭಾಗದಲ್ಲಿ ಹಫ್ತಾ ವಸೂಲಿ ದಂಧೆ ಜೋರಾಗಿ ನಡೆಯುತ್ತಿದೆ.ಉದ್ಯಮಿಗಳು, ಅಂಗಡಿ ಮಾಲೀಕರನ್ನ ಬೆದರಿಸಿ ವಸೂಲಿ ಮಾಡ್ತಿದ್ದಾರೆ.
 
ಮಾಮೂಲಿ ಕೊಡದಿದ್ದಕ್ಕೆ ಉದ್ಯಮಿಯನ್ನ ಬೆದರಿಸಿ ದುಬಾರಿ ಕಾರು ಸುಲಿಗೆ ಮಾಡಿದ್ದಾರೆ.ಸೈಯದ್ ಇಮ್ತಿಯಾಜ್ ಎಂಬುವವರ ಥಾರ್ ಕಾರು ಕೊಂಡೊಯ್ದು ಜಖಂಗೊಳಿಸಿ ಅನೀಸ್ ಎಸ್ಕೇಪ್ ಆಗಿದ್ದಾನೆ.ಬೆಳ್ಳಹಳ್ಳಿ ಬಳಿ ತಮ್ಮದೇ ಟ್ರಾನ್ಸಪೋರ್ಟ್ ಉದ್ಯಮ ಹೊಂದಿರುವ ಇಮ್ತಿಯಾಜ್  ಬಳಿ ಜನವರಿ 23ರಂದು ಅನೀಸ್ ಹಾಗೂ ಮೆಹಬೂಬ್ ಬಂದು ಬೆದರಿಕೆ ಹಾಕಿದ್ದಾರೆ.
 
ಅನೀಸ್ ಹಣ ನೀಡುವಂತೆ ಧಮ್ಕಿ ಹಾಕಿದ್ದಾನೆ.ಇಮ್ತಿಯಾಜ್ ರನ್ನ ಬೆದರಿಸಿ ಅವರ ಥಾರ್ ಕಾರಿನೊನೊಂದಿಗೆ ಎಸ್ಕೇಪ್ ಆಗಿದ್ದಾನೆ.ಬಾಗಲೂರು ಠಾಣೆಯಲ್ಲಿ ಇಮ್ತಿಯಾಜ್ ಪ್ರಕರಣ ದಾಖಲಿಸಿದ್ದಾರೆ.ಎಫ್ಐಆರ್ ಕಾಪಿ‌ ಜೊತೆ 5 ಲಕ್ಷ ಹಣ ತಗೊಂಡು ಬರುವಂತೆ ಅನೀಸ್ ನಿಂದ ಧಮ್ಕಿ ಹಾಕಲಾಗಿದೆ.ಹಣ ನೀಡದಿದ್ದಾಗ ಕಾರನ್ನ ಜಖಂಗೊಳಿಸಿ ಬಾಣಸವಾಡಿ ಬಳಿ ಬಿಟ್ಟು ಪರಾರಿಯಾಗಿದ್ದಾನೆ.ಸದ್ಯ ಕಾರನ್ನ ವಶಕ್ಕೆ ಪಡೆದಿರುವ ಬಾಗಲೂರು‌ ಪೊಲೀಸರಿಂದ ಆರೋಪಿಗಳಿಗಾಗಿ ಶೋಧ ಕಾರ್ಯ ಮುಂದುವರೆದಿದೆ.
 
ಕೆ.ಜಿ.ಹಳ್ಳಿಯ ನಟೋರಿಯಸ್ ರೌಡಿಶೀಟರ್ ಆಗಿರುವ ಅನೀಸ್ ಅಹಮದ್ ಮೇಲೆ ಕೊಲೆ, ಕೊಲೆಯತ್ನ, ದರೋಡೆ ಸೇರಿದಂತೆ 20ಕ್ಕೂ ಅಧಿಕ‌ ಪ್ರಕರಣಗಳಿವೆ.2020ರಲ್ಲಿ ಆರೋಪಿಯ ಕಾಲಿಗೆ ಗುಂಡು ಹಾರಿಸಿ ಕೆ.ಜಿ.ಹಳ್ಳಿ ಪೊಲೀಸರು ವಶಕ್ಕೆ ಪಡೆದಿದ್ರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ