ಶಾಲೆ ಯಾವಾಗ ಆರಂಭಿಸಬೇಕು? ಶಿಕ್ಷಣ ಸಚಿವರಿಗೆ ಸಲಹೆ ಕೊಟ್ಟ ಪೋರಿ!

ಗುರುವಾರ, 4 ಜೂನ್ 2020 (11:33 IST)
ಬೆಂಗಳೂರು: ಕೊರೋನಾದಿಂದಾಗಿ ಸದ್ಯಕ್ಕೆ ಶಾಲೆ ಆರಂಭಿಸುವುದು ಬೇಡ ಎಂದು ಪೋಷಕರ ಒತ್ತಡಕ್ಕೆ ಮಣಿದ ಸರ್ಕಾರ ಶಾಲೆ ಆರಂಭ ಮಾಡದೇ ಇರಲು ನಿರ್ಧರಿಸಿತ್ತು. ಆದರೆ ಶಾಲೆ ಆರಂಭಿಸುವ ಬಗ್ಗೆ ಇದೀಗ ಪುಟಾಣಿ ಹುಡುಗಿಯೊಬ್ಬಳು ಶಿಕ್ಷಣ ಸಚಿವ ಸುರೇಶ್ ಕುಮಾರ್ ಗೆ ಸಲಹೆ ನೀಡಿದ್ದಾಳೆ!


ಎಂದಿನಂತೆ ಕಚೇರಿಗೆ ಹೊರಟಿದ್ದ ಸಚಿವ ಸುರೇಶ್ ಕುಮಾರ್ ಗೆ ಎದುರಾದ ಆ ಪುಟಾಣಿ ಬಾಲೆ ಕೊರೋನಾ ಮುಗಿದ ಮೇಲೆಯೇ ಶಾಲೆ ಶುರು ಮಾಡಿ ಎಂದು ಸಲಹೆ ನೀಡಿದ್ದಾಳೆ.

ಸಚಿವರು ಶಾಲೆ ಯಾವಾಗ ಆರಂಭಿಸಬೇಕು ಎಂದು ಕೇಳಿದ್ದಕ್ಕೆ ಕೊರೋನಾ ಮುಗಿದ ಮೇಲೆಯೇ ಮಾಡಿ ಎಂದಿದ್ದಾಳೆ. ಒಂದು ವೇಳೆ ಕೊರೋನಾ ಸದ್ಯಕ್ಕೆ ಹೋಗದೇ ಇದ್ದರೆ ಎಂದು ಸಚಿವರು ಕೇಳಿದ್ದಕ್ಕೆ ಮತ್ತೆ ಕೊರೋನಾ ಮುಗಿದ ಮೇಲೆಯೇ ಮಾಡಿ ಎಂದಿದ್ದಾಳೆ. ಶಿಕ್ಷಣ ಸಚಿವರಿಗೇ ಸಲಹೆ ನೀಡಿದ ಈ ಪುಟಾಣಿಯ ಫೋಟೋಗಳು ಈಗ ಗಮನ ಸೆಳೆಯುತ್ತಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ