ಗುಂಡಿಗಳ ರಸ್ತೆಗೆ ಯುವಕ‌ ಬಲಿ

ಭಾನುವಾರ, 30 ಅಕ್ಟೋಬರ್ 2022 (14:19 IST)
ರಸ್ತೆಯಲ್ಲಿ ಬಿದ್ದಿದ್ದ ಗುಂಡಿಯಿಂದ ಸರಣಿ ಅಪಘಾತ ಸಂಭವಿಸಿದೆ. ಗುಂಡಿ ರಸ್ತೆಯಿಂದ ಯುವಕ ಬಲಿಯಾದ ಘಟನೆ ಯಲಹಂಕದ ಅಟ್ಟೂರು ಬಡಾವಣೆಯಲ್ಲಿ ಕಳೆದ ರಾತ್ರಿ ನಡೆದಿದೆ.ರಸ್ತೆಯಲ್ಲಿ ಕಾರಿನಲ್ಲಿ ಹೋಗ್ತಿದ್ದ ವೇಳೆ ಗುಂಡಿ ತಪ್ಪಿಸಲು ಹೋಗಿ ಕಾರು ಪಲ್ಟಿಯಾಗಿದೆ.ಕಾರು ಪಲ್ಟಿಯಾದ ಕಾರಣ ಮುಂದೆ ಬರ್ತಿದ್ದ ಬೈಕ್ ಪಲ್ಟಿಯಾಗಿ ಕಾರಿಗೆ ಡಿಕ್ಕಿ ಹೊಡೆದಿದೆ.ಕಾರಿಗೆ ಡಿಕ್ಕಿ‌ ಹೊಡೆದ ಪರಿಣಾಮ ಸ್ಥಳದಲ್ಲೆ ಸವಾರ ದುರ್ಮರಣಕ್ಕೆ ಹೀಡಾಗಿದ್ದಾನೆ ಒರ್ವ ಯುವಕ ಸಾವಾನಾಪ್ಪಿದ್ದಾನೆ. ಮತ್ತೋರ್ವನಿಗೆ ಗಂಬೀರ ಗಾಯವಾಗಿದೆ.
 
ಹಳ್ಳಗಳ ರಸ್ತೆಯಿಂದ ಪದೇ ಪದೇ ಅಪಘಾತವಾಗ್ತಿದೆ ಅಂತ ಸ್ಥಳೀಯರು ಆಕ್ರೋಶ ಹೊರಹಾಕಿದ್ದಾರೆ.ಇನ್ನು ಈ ಕಾರು ಪಲ್ಟಿಯಾಗುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.ಈ ಪ್ರಕರಣ ಯಲಹಂಕ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ