ಸೈನಿಕರಾಗಲು ಹೋಗುತ್ತಿದ್ದ ಯುವಕರು ಅಪಘಾತದಲ್ಲಿ ಸಾವು

geetha

ಸೋಮವಾರ, 5 ಫೆಬ್ರವರಿ 2024 (19:05 IST)
ಬೆಳಗಾವಿ : ಸೈನಿಕರಾಗಲು ಹೋಗುತ್ತಿದ್ದ ಯುವಕರು ಅಪಘಾತದಲ್ಲಿ ಸ್ಥಳದಲ್ಲಿಯೇ ಸಾವನ್ನಪ್ಪಿರುವ ಘಟನೆ ಖಾನಾಪುರ ತಾಲೂಕಿನ ಗುರ್ಲಗಂಜಿ ರಸ್ತೆಯಲ್ಲಿ ನಡೆದಿದೆ. ಬೇಕವಾಡ ಗ್ರಾಮದ ರಾಮಲಿಂಗ ಮುತಗೇಕರ್‌ (20) ಹಾಗೂ ಹನುಮಂತ ಮಹಾಬಲೇಶ್ವರ ಪಾಟೀಲ್‌ (19) ಮೃತ ದುರ್ದೈವಿಗಳು. ಇಬ್ಬರೂ ಸಹ ನಂದಿಹಾಳ ಗ್ರಾಮದ ಸೈನಿಕ ತರಬೇತಿ ಶಿಬಿರಕ್ಕೆ ಸಾಗುತ್ತಿದ್ದರು. ಸ್ಥಳಕ್ಕೆ ಖಾನಾಪುರ ಶಾಸಕ ವಿಠಲ ಹಲಗೇಕರ ಭೇಟಿ ನೀಡಿದ್ದಾರೆ. ಮೃತ ದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಜಿಲ್ಲಾ ಆಸ್ಪತ್ರೆಗೆ ರವಾನಿಸಲಾಗುತ್ತಿದ್ದು, ಖಾನಾಪುರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ