ಎದೆ ನಡುಗಿಸುವಂತಿದೆ ಭಯಾನಕ ಹಿಟ್ ಅಂಡ್ ರನ್ ದೃಶ್ಯ

geetha

ಮಂಗಳವಾರ, 23 ಜನವರಿ 2024 (18:16 IST)
ಬೆಂಗಳೂರು-ಬೆಂಗಳೂರಲ್ಲಿ ಹಿಟ್ ಅಂಡ್ ರನ್ ಪ್ರಕರಣದ ದೃಶ್ಯ ನಡುಕ ಉಂಟುಮಾಡುವಂತಿದೆ.ಕಾರು ಬ್ಯಾನೆಟ್ ಮೇಲೆ ಕುಳಿತವನ ಎಳೆದೊಯ್ದು ಪುಂಡಾಟ ನಡೆಸಲಾಗಿದೆ.ಬ್ಯಾನೆಟ್ ಮೇಲೆ ಮಲಗಿದ್ರು ಕಾರು ಚಲಾಯಿಸಿ ಹುಚ್ಚಾಟ ಮೆರೆಯಲಾಗಿದೆ.400 ಮೀಟರ್ ನಷ್ಟು ದೂರ ಬ್ಯಾನೆಟ್ ಮೇಲೆ ಚಾಲಕ ಎಳೆದೊಯ್ದಿದ್ದಾನೆ.ಸಿಸಿಟಿವಿ ಕ್ಯಾಮೆರಾದಲ್ಲಿ  ಭಯಾನಕ ದೃಶ್ಯ ಸೆರೆಯಾಗಿದೆ.ಕಾರು ಚಾಲಕನ ಪುಂಡಾಟಕ್ಕೆ ಕ್ಯಾಬ್ ಚಾಲಕ ವಿಲ ವಿಲ ಒದ್ದಾಡಿದ್ದಾನೆ.ಮೊಹಮ್ಮದ್ ಮುನೀರ್ ಎಂಬಾತನಿಂದ ಕೃತ್ಯ ನಡೆದಿದೆ.
 
ಕ್ಯಾಬ್ ಚಾಲಕ ಅಶ್ವತ್ಥ್ ನನ್ನ ಬ್ಯಾನೆಟ್ ಮೇಲೆ ಮುನೀರ್ ಹೊತ್ತಯ್ದಿದ್ದಾನೆ.ಜನವರಿ 15 ರಂದು ನಡೆದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.ಮಲ್ಲೇಶ್ವರಂ 18 ನೇ ಕ್ರಾಸ್ ನಲ್ಲಿ ಘಟನೆ ನಡೆದಿದೆ.ಸರ್ಕಲ್ ಮಾರಮ್ಮ ದೇವಸ್ಥಾನ ಬಳಿಯಿಂದ 18 ನೇ ಕ್ರಾಸ್ ಸಿಗ್ನಲ್ ವರೆಗೆ ಬ್ಯಾನೆಟ್ ಮೇಲೆ ಎಳೆದೊಯ್ದು ಪುಂಡಾಟ ಮೆರೆಯಲಾಗಿದೆ.ಸ್ಥಳೀಯರು ಹಿಂದೆ ಹಿಂದೆ ಓಡಿಬಂದ್ರು ಚಾಲಕ ಕಾರು ನಿಲ್ಲಿಸಿಲ್ಲ.ಸಡನ್ ಆಗಿ ಬ್ರೇಕ್ ಹೊಡೆದು ಕೆಳಗೆ ಬೀಳಿಸಲು ಯತ್ನ ನಡೆಸಿದ್ದಾನೆ.
 
ಸರ್ಕಲ್ ಮಾರಮ್ಮ ಸರ್ಕಲ್ ನಲ್ಲಿ ಕ್ಯಾಬ್ ಗೆ ಕಾರು  ಡಿಕ್ಕಿ ಹೊಡೆದಿದೆ.ಕಾರು ಚಾಲಕನನ್ನು ನಿಲ್ಲಿಸುವಂತೆ ಕ್ಯಾಬ್ ಚಾಲಕ ದುಂಬಾಲು ಬಿದ್ದಿದ್ದಾನೆ.ಈ ವೇಳೆ ಕಾರು ನಿಲ್ಲಸದೆ ಎಸ್ಕೇಪ್ ಆಗಲು ಯತ್ನಿಸಿದ್ದು,ಕಾರಿನ ಮುಂದೆ ನಿಂತು ಕೆಳಗೆ ಬರುವಂತೆ ಚಾಲಕ ಪಟ್ಟು ಹೊಡಿದಿದ್ದು,ತಕ್ಷಣ ಚಾಲಕ ಕಾರು ಚಲಾಯಿಸಿದ್ದಾನೆ.ಈ ವೇಳೆ ಬ್ಯಾನೆಟ್ ಮೇಲೆ  ಕ್ಯಾಬ್ ಚಾಲಕ ಅಶ್ವತ್ಥ್ ಕುಳಿತಿದ್ದಾನೆ.

ಬ್ಯಾನೆಟ್ ಮೇಲೆ ಮಲಗಿದ್ರೂ ಡೋಂಟ್ ಕೇರ್ ಎನ್ನುತ್ತಾ ಹಾಗೆಯೇ ಚಲಾಯಿಸಿಕೊಂಡು ಮುನೀರ್ ಹೊರಟಿದ್ದಾನೆ.ಸಿಗ್ನಲ್ ಬಳಿ ಹೋಗ್ತಿದ್ದಂತೆ ಕಾರು ಸ್ಥಳೀಯರು ಅಡ್ಡಗಟ್ಟಿದ್ದಾರೆ.ಇನ್ನೂ ಸ್ಥಳಕ್ಕೆ ಮಲ್ಲೇಶ್ವರಂ ಹೊಯ್ಸಳ ಸಿಬ್ಬಂದಿ ಆಗಮಿಸಿದ್ದಾರೆ.ಪೊಲೀಸರು ಕಾರು ಚಾಲಕನನ್ನು ವಶಕ್ಕೆ ಪಡೆದು ಕರೆದೊಯ್ದಿದ್ದಾರೆ.ಮುನೀರ್ ಮೇಲೆ ಎನ್ ಸಿ ಆರ್ ಪ್ರಕರಣ  ದಾಖಲಿಸಿ ಚಾಲಕರನ್ನ ಮಲ್ಲೇಶ್ವರಂ ಪೊಲೀಸರು ಕಳಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ