ಬೆಂಗಳೂರಿಗರಿಗೆ ತಟ್ಟಿದ ಆಧಾರ್ ಅಪ್ ಡೇಟ್ ಸಂಕಷ್ಟ

ಭಾನುವಾರ, 16 ಜುಲೈ 2023 (12:59 IST)
ಆಧಾರ್ ಅಪ್ ಡೇಟ್ ಮಾಡಿಸಲು ಜನರು ಪರದಾಟ ನಡೆಸ್ತಿದ್ದಾರೆ.ಮಲ್ಲೇಶ್ವರಂನ ಬೆಂಗಳೂರು 1 ಸೇವಾಕೇಂದ್ರದಲ್ಲಿ ಜನರು ಆಕ್ರೋಶ ಹೊರಹಾಕಿದ್ದಾರೆ.ಆಧಾರ್ ಅಪ್ ಡೇಟ್ ಮಾಡಲು ದಿನಕ್ಕೆ 60 ಟೋಕನ್ ನಿಗಧಿ ಮಾಡಿದ್ದು,ಬೆಳಗ್ಗೆ 5 ಗಂಟೆಗೆ ಬಂದ್ರೂ ಟೋಕನ್ ಸಿಗದೇ ಪರದಾಟ ನಡೆಸಿದ್ದಾರೆ.ಬೆಂಗಳೂರು 1 ಕೇಂದ್ರದ ವ್ಯವಸ್ಥೆಗೆ ಹಿರಿಯ ನಾಗರೀಕರು ಕಿಡಿಕಾರಿದ್ದಾರೆ.
 
ಬೆಳಗ್ಗೆಯಿಂದ ಇಲ್ಲೇ ಕಾದು ಕುಳಿತಿದ್ದೇವೆ.ಟೋಕನ್ ಇಲ್ಲ ಅಂತಿದ್ದಾರೆ, ಇಲ್ಲಿ ಇಲ್ಲದೇ ಇದ್ದವರಿಗೆ ಟೋಕನ್ ಕೊಟ್ಟಿದ್ದಾರೆ ಅಂತಾ ಆರೋಪ ಮಾಡಿದ್ದು,ಸಿಗುವುದೊಂದು ಭಾನುವಾರ ಅದರಲ್ಲೂ ಹೀಗೆ ಕಾಯಬೇಕು.ಇದೆಲ್ಲ ಯಾವಾಗ ಸರಿಯಾಗುತ್ತೆ ಅಂತಾ ಜನರು ಕಿಡಿಕಾರಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ