ಹಂಪಿಯಲ್ಲಿ ನಡೆದ ಜಿ20 ಸಭೆ ಯಶಸ್ವಿ : ಅಮಿತಾಬ್ ಕಾಂತ್

ಭಾನುವಾರ, 16 ಜುಲೈ 2023 (08:40 IST)
ವಿಜಯನಗರ : ಹಂಪಿಯಲ್ಲಿ ನಡೆದ ಜಿ20  ಶೆರ್ಪಾ ಸಭೆ ಯಶಸ್ವಿಯಾಗಿದೆ. ಈ ಸಭೆಯಲ್ಲಿ ಭಾಗವಹಿಸಿದ ಶೆರ್ಪಾಗಳಿಗೆ ಅಭೂತಪೂರ್ವ ಅನುಭವವಾಗಿದೆ ಎಂದು ಭಾರತದ ಶೆರ್ಪಾ ಅಮಿತಾಬ್ ಕಾಂತ್ ತಿಳಿಸಿದ್ದಾರೆ.

ಹಂಪಿಯ ಎವಾಲ್ವ್ ಬ್ಯಾಕ್ ಹೋಟೆಲ್ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಹಂಪಿಯನ್ನು ಸ್ವಚ್ಛವಾಗಿ ಹಾಗೂ ಸುಂದರವಾಗಿ ಕಾಣುವಂತೆ ಮಾಡಿದ ಪ್ರವಾಸೋದ್ಯಮ ಹಾಗೂ ಪುರಾತತ್ವ ಇಲಾಖೆಗಳ ಅಧಿಕಾರಿಗಳು ಅಭಿನಂದನಾರ್ಹರು.

ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಸ್ಥಳೀಯ ಕಲಾವಿದರು ಹಾಗೂ ಮಕ್ಕಳ ಪ್ರದರ್ಶನ ಚೆನ್ನಾಗಿತ್ತು. ಹಂಪಿ ಬೈ ನೈಟ್ ಬಹಳ ಒಳ್ಳೆಯ ಅನುಭವ ನೀಡಿದೆ. ಹಂಪಿ ಭಿನ್ನವಾಗಿ ಸುಂದರವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ