ಅನಧಿಕೃತವಾಗಿ ನೇತುಹಾಕಿರುವ ಟಿವಿ ಕೇಬಲ್ ಹಾಗೂ ಓ.ಎಫ್.ಸಿ ಕೇಬಲ್‌ಗಳನ್ನು ತೆರವುಗೊಳಿಸುವ ಬಗ್ಗೆ

ಮಂಗಳವಾರ, 24 ಆಗಸ್ಟ್ 2021 (20:46 IST)
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಎಲ್ಲಾ ಟಿವಿ ಕೇಬಲ್ ಆಪರೇಟರ್‌ಗಳು, ಓ.ಎಫ್.ಸಿ ಕೇಬಲ್ , ಸೇವಾ ಸಂಸ್ಥೆ(Internet Service Provider)ಗಳು ಹಾಗೂ ಇನ್ನಿತರೆ ಸಂಬಂಧಪಟ್ಟ ಸಂಸ್ಥೆಗಳು ಪಾಲಿಕೆ ವ್ಯಾಪ್ತಿಯ ರಸ್ತೆ ಪಾದಚಾರಿ ಮಾರ್ಗ, ರಸ್ತೆ ಬದಿ ಮರಗಳು ಮತ್ತು ವಿದ್ಯುತ್ ಕಂಬಗಳ ಮೇಲೆ ಹಾಗೂ ಇತರೆಡೆ ಅನಧಿಕೃತವಾಗಿ ನೇತುಹಾಕಿರುವ ಬಿವಿ ಕೇಬಲ್ ಹಾಗೂ ಓ.ಎಫ್.ಸಿ ಕೇಬಲ್‌ಗಳನ್ನು ತೆರವುಗೊಳಿಸುವಂತೆ ಘನ ಉಚ್ಚ ನ್ಯಾಯಾಲಯವು ಲವ್ ಅರ್ಜಿ ಸಂಖ್ಯೆ: 15291/2020 , ದಿನಾಂಕ : 24-02-2021 ಮತ್ತು 03-08-2021ರ ದೈನಂದಿನ ಆದೇಶದಲ್ಲಿ ನಿರ್ದೇಶನ ನೀಡಿರುತ್ತದೆ. 
 
ಆದ್ದರಿಂದ ಈ ತಿಳುವಳಿಕೆ ಪತ್ರ ಪ್ರಕಟಣೆಯಾದ ದಿನದಿಂದ 01 ತಿಂಗಳ ಅವಧಿಯೊಳಗೆ ಎಲ್ಲಾ ಅನಧಿಕೃತ ಟಿವಿ ಕೇಬಲ್, ಓ.ಎಫ್.ಸಿ ಕೇಬಲ್ ಹಾಗೂ ಇತರೆ ಕೇಬಲ್‌ಗಳನ್ನು ತೆರವುಗೊಳಿಸಬೇಕೆಂದು ಸಂಬಂಧಪಟ್ಟ ಕೇಬಲ್ ಆಪರೇಟರ್‌ಗಳು, ಓ.ಎಫ್.ಸಿ ಕೇಬಲ್ ಸೇವಾ ಸಂಸ್ಥೆ(Internet Service Provider)ಗಳು ಹಾಗೂ ಸಂಬಂಧಪಟ್ಟವರು ನಿಗದಿತ ಅವಧಿಯಲ್ಲಿ ತೆರವುಗೊಳಿಸಬೇಕು. ತೆರವುಗೊಳಿಸಲು ವಿಫಲವಾದ ಪಕ್ಷದಲ್ಲಿ ಅಂತಹ ಅನಧಿಕೃತ ಕೇಬಲ್‌ಗಳನ್ನು ಯಾವುದೇ ಮುನ್ಸೂಚನೆ ನೀಡದೆ ತೆರವುಗೊಳಿಸಲು ಕ್ರಮವಹಿಸಲಾಗುವುದು ಹಾಗೂ ಅಂತಹ ಅನಧಿಕೃತ ಮಾಲೀಕರು/ಸಂಘ - ಸಂಸ್ಥೆಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯ ಆಯುಕ್ತರು ಶ್ರೀ ಗೌರವ್ ಗುಪ್ತ ರವರು ಈ ತಿಳಿಸಿರುತ್ತಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ