ಪರೀಕ್ಷೆಗೆ ಗೈರು : ಹಿಜಬ್ಗೆ ಆಗ್ರಹಿಸಿ ಪ್ರತಿಭಟನೆ

ಭಾನುವಾರ, 6 ಮಾರ್ಚ್ 2022 (12:10 IST)
ಚಿಕ್ಕಮಗಳೂರು : ನಮಗೆ ಪರೀಕ್ಷೆ-ಹಿಜಬ್ ಎರಡೂ ಬೇಕು ಎಂದು ಹಿಜಬ್ ಧರಿಸಿದ ವಿದ್ಯಾರ್ಥಿನಿಯರು ಕಾಲೇಜಿನ ಗೇಟ್ ಮುಂದೆಯೇ ಪ್ರತಿಭಟನೆ ನಡೆಸಿದ ಘಟನೆ ನಗರದ ಐಡಿಎಸ್ಜಿ ಕಾಲೇಜಿನಲ್ಲಿ ನಡೆದಿದೆ.
 
ನಗರದ ಐಡಿಎಸ್ಜಿ ಪದವಿ ಕಾಲೇಜಿಗೆ ಇಂದು ಸುಮಾರು 25ಕ್ಕೂ ಹೆಚ್ಚು ವಿಧ್ಯಾರ್ಥಿನಿಯರು ಹಿಜಬ್ ಧರಿಸಿ ಬಂದಿದ್ದರು. ಈ ವೇಳೆ ಕಾಲೇಜು ಆಡಳಿತ ಮಂಡಳಿ ಹಿಜಬ್ ಧರಿಸಿ ಬಂದರೆ ಕಾಲೇಜಿಗೆ ಪ್ರವೇಶವಿಲ್ಲ ಎಂದು ಗೇಟ್ ಮುಚ್ಚಿದ್ದರು. ಹೀಗಾಗಿ ವಿದ್ಯಾರ್ಥಿನಿಯರು ಕಾಲೇಜಿನ ಗೇಟ್ ಮುಂಭಾಗವೇ ಧರಣಿ ನಡೆಸಿದರು.

ಗೇಟ್ ಬಳಿ ಧರಣಿಗೆ ಕೂತ ವಿಧ್ಯಾರ್ಥಿನಿಯರು ಸುಡು ಬಿಸಿಲಲ್ಲೇ ಪುಸ್ತಕ ತೆಗೆದು ಓದಲು ಮುಂದಾದರು. ಪ್ರಸ್ತುತ ಕಾಲೇಜಿನಲ್ಲಿ ಇಂಟರ್ನಲ್ ಪರೀಕ್ಷೆ ನಡೆಯುತ್ತಿದೆ. ವಿದ್ಯಾರ್ಥಿನಿಯರು ನಮಗೆ ಪರೀಕ್ಷೆ ಹಾಗೂ ಹಿಜಬ್ ಎರಡೂ ಮುಖ್ಯ ಎಂದು ಪ್ರತಿಭಟನೆ ನಡೆಸಿದರು. 

ಕಾಲೇಜು ಆಡಳಿತ ಮಂಡಳಿ ಗೇಟ್ ಮುಚ್ಚುತ್ತಿದ್ದಂತೆ ವಿದ್ಯಾರ್ಥಿನಿಯರು ನಮಗೆ ಕ್ಯಾಂಪಸ್ಗೆ ಪ್ರವೇಶಿಸಲು ಅವಕಾಶ ನೀಡಿ ಎಂದು ಆಗ್ರಹಿಸಿದರು. ಈ ವೇಳೆ ವಿದ್ಯಾರ್ಥಿನಿಯರು ಹಾಗೂ ಆಡಳಿತ ಮಂಡಳಿಯ ನಡುವೆ ಮಾತಿನ ಚಕಮಕಿ ಕೂಡ ನಡೆಯಿತು.

ಆದರೆ ಆಡಳಿತ ಮಂಡಳಿ ಸಾಕಷ್ಟು ವಿದ್ಯಾರ್ಥಿನಿಯರು ಹಿಜಬ್ ತೆಗೆದು ಪರೀಕ್ಷೆ ಬರೆಯುತ್ತಿದ್ದಾರೆ. ತರಗತಿಗಳಲ್ಲಿ ಕೂತಿದ್ದಾರೆ. ನೀವು ಹಿಜಬ್ ತೆಗೆದು ಬನ್ನಿ ಎಂದು ಸೂಚಿಸಿದರು. ಅದಕ್ಕೆ ಒಪ್ಪದ ವಿದ್ಯಾರ್ಥಿನಿಯರು ಬಿಸಿಲಲ್ಲೇ ಪ್ರತಿಭಟನೆ ನಡೆಸಿದರು. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ