ದ್ವಿತೀಯ ಪಿಯು ಪರೀಕ್ಷೆ'ಯ ಸಮಯಕ್ಕೆ 'ಜೆಇಇ ಮುಖ್ಯ ಪರೀಕ್ಷೆ

ಬುಧವಾರ, 2 ಮಾರ್ಚ್ 2022 (20:11 IST)
ಬೆಂಗಳೂರು:-ಜೆಇಇ ಮುಖ್ಯ ಪರೀಕ್ಷೆಯ ಮೊದಲ ಹಂತದ ಪರೀಕ್ಷೆಯನ್ನು ಏಪ್ರಿಲ್ 16 ಮತ್ತು 17ರಂದು ಹಾಗೂ ಎರಡನೇ ಹಂತದ ಪರೀಕ್ಷೆಯನ್ನು ಮೇ.24 ರಿಂದ 29ರವರೆಗೆ ನಡೆಸಲಾಗುತ್ತದೆ ಎಂಬುದಾಗಿ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ ( National Testing Agency -NTA ) ಮಂಗಳವಾರ ತಿಳಿಸಿತ್ತು. ಆದ್ರೇ.ಎನ್ ಟಿ ಎ ನಿಗದಿ ಪಡಿಸಿರುವಂತ ಜೆಇಇ ಮುಖ್ಯ ಪರೀಕ್ಷೆಯ ದಿನಾಂಕದಂದೇ ಕರ್ನಾಟಕದ ದ್ವಿತೀಯ ಪಿಯು ವಿದ್ಯಾರ್ಥಿಗಳಿಗೆ ವಾರ್ಷಿಕ ಪರೀಕ್ಷೆ ಕೂಡ ನಡೆಯಲಿದೆ. ಹೀಗಾಗಿ ಐಐಟಿ ವ್ಯಾಸಂಗದ ನಿರೀಕ್ಷೆಯಲ್ಲಿದ್ದಂತ ಕರ್ನಾಟಕದ ವಿದ್ಯಾರ್ಥಿಗಳು ಸಂಕಷ್ಟಕ್ಕೆ ಸಿಲುಕುವಂತೆ ಆಗಿದೆ.
ಪದವಿ ಪೂರ್ವ ಶಿಕ್ಷಣ ಇಲಾಖೆಯಿಂದ ದ್ವಿತೀಯ ಪಿಯುಸಿ ಮುಖ್ಯ ಪರೀಕ್ಷೆಯ ಅಂತಿಮ ವೇಳಾಪಟ್ಟಿಯನ್ನು ಪ್ರಕಟಿಸಲಾಗಿತ್ತು. ಈ ವೇಳಾಪಟ್ಟಿಯಂತೆ ದಿನಾಂಕ 16-03-2022ರಿಂದ ಪರೀಕ್ಷೆ ಆರಂಭಗೊಂಡು, 06-05-2022ರವರೆಗೆ ನಡೆಯಲಿದೆ. ಇದೇ ಸಮಯಕ್ಕೆ ನಿನ್ನೆ ಎನ್ ಟಿ ಎ ನಿಗದಿ ಪಡಿಸಿರುವಂತ ಜೆಇಇ ಮುಖ್ಯ ಪರೀಕ್ಷೆಗೆ ದಿನಾಂಕ ನಿಗದಿ ಪಡಿಸಲಾಗಿದೆ.
ಮೊದಲ ಹಂತದ ಜೆಇಇ ಮುಖ್ಯ ಪರೀಕ್ಷೆಯನ್ನು ದಿನಾಂಕ 16-03-2022 ಮತ್ತು 17-03-2022ರಂದು ನಡೆಸಲಾಗುತ್ತಿದೆ ಎಂದು ತಿಳಿಸಿದೆ. ಇದೇ ದಿನಾಂಕದಂದು ಕರ್ನಾಟಕದ ವಿದ್ಯಾರ್ಥಿಗಳಿಗೆ ಗಣಿತ, ಶಿಕ್ಷಣ ಶಾಸ್ತ್ರ, ಮೂಲ ಗಣಿತ ಪರೀಕ್ಷೆಯನ್ನು ನಿಗದಿ ಪಡಿಸಲಾಗಿದೆ. ಹೀಗಾಗಿ ಜೆಇಇ ಮುಖ್ಯ ಪರೀಕ್ಷೆಯಿಂದ ವಂಚಿತರಾಗುವಂತ ಭೀತಿಯನ್ನು ವಿದ್ಯಾರ್ಥಿಗಳು ಎದುರಿಸುವಂತೆ ಆಗಿದೆ. ಅಲ್ಲದೇ ದಿನಾಂಕ ಬದಲಾವಣೆ ಮಾಡುವಂತೆ ಪದವಿಪೂರ್ವ ಶಿಕ್ಷಣ ಮಂಡಳಿಗೆ ಆಗ್ರಹಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ