ಅಶೋಕ್ ಖೇಣಿ ವರ್ತನೆಗೆ ಕಾಂಗ್ರೆಸ್ ಹೈ-ಕಮಾಂಡ್ ಗರಂ

ಮಂಗಳವಾರ, 7 ಜೂನ್ 2016 (11:50 IST)
ಕನ್ನಡ ಮಕ್ಕಳ ಪಕ್ಷದ ಶಾಸಕ ಅಶೋಕ್ ಖೇಣಿ ವರ್ತನೆಗೆ ಕಾಂಗ್ರೆಸ್ ಹೈ-ಕಮಾಂಡ್ ಬೇಸರ ವ್ಯಕ್ತಪಡಿಸಿದೆ.
 
ರಾಜ್ಯಸಭೆ ಚುನಾವಣೆಗೆ ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ ಸೂಚಿಸಿರುವ ಶಾಸಕರು ಬೇರೆ ಪಕ್ಷದ ಕಡೆ ವಾಲದಂತೆ, ಕಾಂಗ್ರೆಸ್ ಶಾಸಕ ಎಸ್.ಟಿ.ಸೋಮಶೇಖರ್ ಉಸ್ತುವಾರಿಯಲ್ಲಿ ಮುಂಬೈಗೆ ತೆರಳಿ ಖಾಸಗಿ ರೆಸಾರ್ಟ್‌ನಲ್ಲಿ ವಾಸ್ತವ್ಯ ಹೊಡಿದ್ದರು.
 
ಕಾಂಗ್ರೆಸ್ ಬೆಂಬಲಿತ ಕನ್ನಡ ಮಕ್ಕಳ ಪಕ್ಷದ ಶಾಸಕ ಅಶೋಕ್ ಖೇಣಿ, ನಿನ್ನೆ ಮಹಿಳಾ ಪತ್ರಕರ್ತರ ಮೇಲೆ ಹರಿಹಾಯ್ದಿದ್ದರು. ಈ ಹಿನ್ನೆಲೆಯಲ್ಲಿ ಶಾಸಕ ಅಶೋಕ್ ಖೇಣಿ ಮತ್ತು ರೆಸಾರ್ಟ್ ರಾಜಕಾರಣ ಉಸ್ತುವಾರಿ ಎಸ್.ಟಿ.ಸೋಮಶೇಖರ್ ಮೇಲೆ ಕಾಂಗ್ರೆಸ್ ಹೈಕಮ್ಯಾಂಡ್ ಗರಂ ಆಗಿದೆ.
 
ಇತ್ತ ಕಾಂಗ್ರೆಸ್ ಬೆಂಬಲಿತ ಶಾಸಕರನ್ನು ಮುಂಬೈನಿಂದ ಸ್ಥಳಾಂತರಿಸುವ ಕುರಿತು ಇಂಧನ ಸಚಿವ ಡಿ.ಕೆ.ಶಿವಕುಮಾರ ಚಿಂತನೆ ನಡೆಸುತ್ತಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯನವರು ಶಾಸಕರು ಮುಂಬೈನಿಂದ ಮರಳಿ ಬರುವುದಾದರೆ ಬರಲಿ ಎಂದು ಹೇಳಿದ್ದಾರೆ. 

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ