ಹೈಕೋರ್ಟ್​ನಿಂದ ಎಸಿಬಿ ರದ್ದು

geetha

ಗುರುವಾರ, 22 ಫೆಬ್ರವರಿ 2024 (14:32 IST)
ಬೆಂಗಳೂರು-ಎಸಿಬಿಯಲ್ಲಿದ್ದ ಒಟ್ಟು 524 ಹುದ್ದೆಗಳನ್ನ ವಿಂಗಡಿಸಿ ಎರಡು ಎರಡು ಇಲಾಖೆಗೆ ವರ್ಗಾಹಿಸಲಾಗಿದೆ.ಹೈಕೋರ್ಟ್​ನಿಂದ ಎಸಿಬಿ ರದ್ದು ಮಾಡಿ ಎಸಿಬಿಯಲ್ಲಿದ್ದ ಹುದ್ದೆಗಳನ್ನ ಲೋಕಾಯುಕ್ತ ಸಂಸ್ಥೆ ಮತ್ತು ಪೊಲೀಸ್ ಇಲಾಖೆಗಳಿಗೆ ಸರ್ಕಾರ ವರ್ಗಾವಣೆ ಮಾಡಿದೆ.2022ರ ಆಗಸ್ಟ್​.11 ರಂದು ಎಸಿಬಿ ರದ್ದುಗೊಳಿಸಿ ಹೈಕೋರ್ಟ್ ಆದೇಶಿಸಿತ್ತು. ಎಸಿಬಿ ರದ್ದು ಹಿನ್ನೆಲೆ ಅಲ್ಲಿ ಇರುವಂತಹ ಹುದ್ದೆಗಳು ಖಾಲಿಯಾಗಿತ್ತು.
 
266ಹುದ್ದಗೆಳು ಎಸಿಬಿಯಿಂದ ಲೋಕಾಯಕ್ತಕ್ಕೆ ವರ್ಗಾವಣೆ 258ಹುದ್ದೆಗಳು ಪೊಲೀಸ್ ಇಲಾಖೆಗೆ ವರ್ಗಾವಣೆ ಮಾಡಿ ಕರ್ನಾಟಕ ಸರ್ಕಾರದಿಂದ ಆದೇಶ ಹೊರಡಿಸಲಾಗಿದೆ.ಲೋಕಾಯಕ್ತದಲ್ಲಿ ಅಧಿಕಾರಿ, ಸಿಬ್ಬಂದಿ ಕೊರತೆ ಹಿನ್ನೆಲೆ ಇರುವಂತಹ ಅಧಿಕಾರಿ ಸಿಬ್ಬಂದಿಯಿಂದ ಕೇಸ್ ಗಳನ್ನು ಕ್ಲಿಯರ್ ಮಾಡಲು ಕಷ್ಟ ಆಗ್ತಿತ್ತು ಹೆಚ್ಚುವರಿ ಅಧಿಕಾರಿ, ಸಿಬ್ಬಂದಿ ನೇಮಕಕ್ಕೆ ಮನವಿ ಮಾಡಿದ್ದ ಲೋಕಾಯಕ್ತ ಅಧಿಕಾರಿಗಳು ಹೀಗಾಗಿ ಎಸಿಬಿಯಲ್ಲಿದ್ದ ಹುದ್ದೆಗಳನ್ನ ಲೋಕಾಯಕ್ತಕ್ಕೆ ವರ್ಗಾಯಿಸಿ ಆದೇಶ ಮಾಡಲಾಗಿತ್ತು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ