ಮಮತಾ ಬ್ಯಾನರ್ಜಿ ಸರ್ಕಾರದಿಂದ ಮತ್ತೊಬ್ಬ ಮಂತ್ರಿಗೆ ಗೇಟ್‌ ಪಾಸ್‌

geetha

ಶನಿವಾರ, 17 ಫೆಬ್ರವರಿ 2024 (18:03 IST)
ಪಶ್ಚಿಮ ಬಂಗಾಳ-ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ತನಿಖಾ ಸಂಸ್ಥೆಗಳಿಂದ ಭ್ರಷ್ಟಾಚಾರ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ತಮ್ಮ ಸರ್ಕಾರ ಹಿರಿಯ ಸಚಿವ ಜ್ಯೋತಿಪ್ರಿಯ ಮಲ್ಲಿಕ್‌ ಅವರನ್ನು ಸಂಪುಟದಿಂದ ಹೊರ ಹಾಕಿದ್ದಾರೆ. ಪಿಡಿಎಸ್‌ ಹಗರಣದಲ್ಲಿ ಭಾಗಿಯಾಗಿರುವ ಆರೋಪದ ಮೇಲೆ ಅವರನ್ನು ಇ ಡಿ ಅಧಿಕಾರಿಗಳು ವಶಕ್ಕೆ ಪಡೆದಿದ್ದರು.

ಸಾರ್ವಜನಿಕ ಪೂರೈಕೆಯಾಗಬೇಕಿದ್ದ ಧವಸ ಧಾನ್ಯಗಳನ್ನು ವರ್ತಕರಿಗೆ ಮಾರಿ ಹಣ ಗಳಿಸಿರುವ ಈ ಹಗರಣದಲ್ಲಿ ಸರಿಸುಮಾರು 20 ಸಾವಿರ ಕೋಟಿ ರೂ. ಹಗರಣ ನಡೆದಿದೆಯೆನ್ನಲಾಗಿದ್ದು,  ಜ. 20 ರಂದು ಜಾರಿ ನಿರ್ದೇಶನಾಲಯವು ಕೊಲ್ಕತ್ತಾ ಹೈಕೋರ್ಟ್‌ ನಲ್ಲಿ ಪ್ರಕರಣದ ಕುರಿತು ದಾಖಲೆ ಒದಗಿಸಿತ್ತು. 

ಟಿಎಂಸಿ ಪಕ್ಷದ ಸಣ್ಣ ನೀರಾವರಿ ಮತ್ತು ಜಲಸಂಪನ್ಮೂಲ ಸಚಿವ ಪಾರ್ಥಾ ಭೌಮಿಕ್‌ ಅವರಿಗೆ ಈಗ ಹೆಚ್ಚುವರಿಯಾಗಿ ಮಲ್ಲಿಕ್‌ ನಿರ್ವಹಿಸುತ್ತಿದ್ದ ಖಾತೆಯನ್ನು ನೀಡಲಾಗಿದೆ. ಈ ಮುನ್ನ ಬ್ಯಾನರ್ಜಿ ಸಂಪುಟದ ಹಿರಿಯ ಸಚಿವ ಪಾರ್ಥ ಚಟರ್ಜಿ ಮತ್ತು ಅವರ ಸಮೀಪವರ್ತಿ ಅರ್ಪಿತಾ ಮುಖರ್ಜಿಯನ್ನು ಉದ್ಯೋಗಕ್ಕಾಗಿ ಲಂಚ ಪಡೆದ ಹಗರಣದಲ್ಲಿ ಬಂಧಿಸ ಒಳಗಟ್ಟಲಾಗಿತ್ತು. 
 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ