ಕೆಎಎಸ್ ಅಧಿಕಾರಿ ಡಾ.ಸುಧಾ ಮನೆ ಮೇಲೆ ಎಸಿಬಿ ರೈಡ್; ಕೆಜಿ ಗಟ್ಟಲೆ ಚಿನ್ನ, ನಗದು ಪತ್ತೆ
ಶನಿವಾರ, 7 ನವೆಂಬರ್ 2020 (14:19 IST)
ಬೆಂಗಳೂರು : ಇಂದು ಕೆಎಎಸ್ ಅಧಿಕಾರಿ ಡಾ.ಸುಧಾ ಮನೆ ಮೇಲೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದು, ಆ ವೇಳೆ ಕೆಜಿ ಗಟ್ಟಲೆ ಚಿನ್ನ, ನಗದು ಪತ್ತೆಯಾಗಿದೆ ಎನ್ನಲಾಗಿದೆ.
ಬೆಂಗಳೂರಿನ ಕೊಡಿಗೇಹಳ್ಳಿಯಲ್ಲಿರುವ ಸುಧಾ ಮನೆಯಲ್ಲಿ ಸತತ 5 ಗಂಟೆಗಳ ಕಾಲ ಅಧಿಕಾರಿಗಳು ಪರಿಶೀಲನೆ ನಡೆಸಿದ್ದು, ಆ ವೇಳೆ ಸುಮಾರು ಕೆಜಿ ಗಟ್ಟಲೆ ಚಿನ್ನಾಭರಣ ಹಾಗೂ ಸುಮಾರು 10 ಲಕ್ಷ ನಗದು ಸಿಕ್ಕಿದೆ ಎನ್ನಲಾಗಿದೆ.
ಇನ್ನೂ 6ಕಡೆ ಸಿಬಿಐಗಳು ದಾಳಿ ನಡೆಸಿದ್ದಾರೆ. ಹಾಗೇ ಮೈಸೂರಿನಲ್ಲಿರುವ ಸುಧಾ ಅವರ ಸಂಬಂಧಿಕರ ಮನೆ ಮೇಲೂ ಎಸಿಬಿ ದಾಳಿ ಮಾಡಿ ಪರಿಶೀಲನೆ ನಡೆಸಿದ್ದಾರೆ.