ಮೈಸೂರಿನ ಕರಾಮುವಿಯ ಶೈಕ್ಷಣಿಕ ಸಾಲಿನ ಜನವರಿ ಆವೃತ್ತಿ ಪ್ರವೇಶಾತಿ ಆರಂಭ

ಮಂಗಳವಾರ, 22 ಫೆಬ್ರವರಿ 2022 (20:08 IST)
ಮೈಸೂರಿನ ಕರಾಮುನಿವಿಯು ಪ್ರಸಕ್ತ 2021-22ನೇ (ಜನವರಿ ಆವೃತ್ತಿ) ಶೈಕ್ಷಣಿಕ ಸಾಲಿಗೆ ಪ್ರವೇಶಾತಿ ಪ್ರಕ್ರಿಯೆ ನಡೆಯುತ್ತಿದೆ.
ಸ್ನಾತಕ, ಸ್ನಾತಕೋತ್ತರ ಕೋರ್ಸ್ ಗಳಾದ ಬಿಎ, ಬಿಕಾಂ, ಬಿಬಿಎ, ಬಿಸಿಎ, ಬಿಎಸ್ಸಿ, ಎಂಎ, ಎಂಸಿಜೆ, ಎಂ.ಕಾಂ, ಬಿ.ಎಲ್‌ಐ..ಎಸ್ಸಿ, ಎಂ.ಎಲ್.ಐ.ಎಸ್ಸಿ, ಎಂಬಿಎ, ಪಿಜಿ, ಡಿಪ್ಲೋಮಾ ಪ್ರೊಗ್ರಾಮ್ಸ್ , ಸರ್ಟಿಫಿಕೇಟ್ ಪ್ರೊಗ್ರಾಮ್ಸ್ ಪ್ರವೇಶಾತಿ ಮಾಡಿಕೊಳ್ಳಲಾಗುತ್ತಿದೆ.
(ಬಿಇಡಿ ಕೋರ್ಸ್ ಗೆ ಸಿಇಟಿ ಮೂಲಕ ಪ್ರವೇಶಾತಿ ಇರುತ್ತದೆ.
ಪ್ರಥಮ ವರ್ಷದ ಈ ಮೇಲ್ಕಂಡ ಕೋರ್ಸ್ ಗಳ ಪ್ರವೇಶಾತಿ ಪ್ರಾರಂಭ ಫೆ.14 ರಿಂದಲೇ ಪ್ರಾರಂಭವಾಗಿದೆ.
ಪೋಷಕರು ಮತ್ತು ವಿದ್ಯಾರ್ಥಿಗಳಿಗೆ ತಿಳಿಸುವುದೇನೆಂದರೆ ಕರಾಮುವಿಯ ಅಧಿಕೃತ ವೆಬ್ ಸೈಟ್ www.ksoumysuru.ac.inನಲ್ಲಿ KSOU Admission Portal ಮೂಲಕ ಈ ಮೇಲ್ಕಂಡ ಪದವಿಗಳಿಗೆ ಆನ್ ಲೈನ್ ನಲ್ಲಿ ಅರ್ಜಿ ಭರ್ತಿ ಮಾಡಿ ನಂತರ ಪ್ರಾದೇಶಿಕ ಕೇಂದ್ರಕ್ಕೆ ಖುದ್ದಾಗಿ ಭೇಟಿ ನೀಡಿ ಆನ್ ಲೈನ್ ಮುಖಾಂತರ ಪ್ರವೇಶಾತಿ ಶುಲ್ಕ ಪಾವತಿಸಿ ಪ್ರವೇಶಾತಿ ಪಡೆಯಬಹುದು.
 
ವಿಶೇಷ ಸೂಚನೆ: ಬಿಪಿಎಲ್ ಕಾರ್ಡ್ ಅನ್ನು ಹೊಂದಿರುವ ಮಹಿಳಾ ವಿದ್ಯಾರ್ಥಿಗಳಿಗೆ ಮತ್ತು ಡಿಫೆನ್ಸ್ ಹಾಗೂ ಎಕ್ಸ್ ಸರ್ವೀಸ್ ಮನ್ ವಿದ್ಯಾರ್ಥಿಗಳಿಗೆ ಶುಲ್ಕದಲ್ಲಿ ಶೇಕಡ 15ರಷ್ಟು ರಿಯಾಯಿತಿ ನೀಡಲಾಗುವುದು. ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗದ ವಿದ್ಯಾರ್ಥಿಗಳು ಅಗತ್ಯ ದಾಖಲೆಗಳನ್ನು ಒದಗಿಸಿದಲ್ಲಿ ಪ್ರವೇಶಾತಿ ಶುಲ್ಕದಲ್ಲಿ ವಿನಾಯಿತಿ ಪಡೆಯಬಹುದು.
ಹೆಚ್ಚಿನ ಮಾಹಿತಿಗೆ ಚಾಮರಾಜಪೇಟೆಯಲ್ಲಿರುವ ಕರಾಮುವಿಯ ಬೆಂಗಳೂರು ಪ್ರಾದೇಶಿಕ ನಿರ್ದೇಶಕರಾದ ಗಿರೀಶ್ ಎಚ್, ಎನ್ ಅವರನ್ನು ಸಂಪರ್ಕ ಮಾಡಬಹುದು. ದೂ.ಸಂ 080-26603664 ಕರೆ ಮಾಡಬಹುದು.
ಅಥವಾ ಡಾ. ಲೋಕೇಶ್, ಪ್ರಾದೇಶಿಕ ನಿರ್ದೇಶಕರು, ಕ.ರಾ.ಮು.ವಿ ಮಹಿಳಾ ಪ್ರಾದೇಶಿಕ ಕೇಂದ್ರ, ಸರ್ಕಾರಿ ಪದವಿ ಪೂರ್ವ ಬಾಲಕಿಯರ ಕಾಲೇಜು, 4ನೇ ಮುಖ್ಯರಸ್ತೆ, 13ನೇ ಅಡ್ಡರಸ್ತೆ, ಮಲ್ಲೇಶ್ವರಂ, ಬೆಂಗಳೂರು-3, ಕಚೇರಿ ದೂರವಾಣಿ ಸಂಖ್ಯೆ 08 23448811, 9844506629, 9620395584, 7760848564 ಅನ್ನು ಸಂಪರ್ಕಿಸಬಹುದು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ