ಅರ್ಚನಾ ಅವರ ಮಗಳು ಯುವಿಕಾ ರೆಡ್ಡಿ (21)ಬಿಕಾಂ ವಿದ್ಯಾಬ್ಯಾಸ ಮಾತಿದ್ದು, ಈಕೆ ನವೀನ್ ಜತೆ ಸೇರಿ ತನ್ನ ತಾಯಿ ಅರ್ಚನಾ ರೆಡ್ಡಿ ಕೊಲೆಗೆ ಸಂಚು ರೂಪಿಸಿದ್ದಳು ಎಂದು ಆಗ್ನೇಯ ವಿಭಾಗದ ಡಿಸಿಪಿ ಶ್ರೀನಾಥ್ ಜೋಷಿ ಈ ಸಂಜೆಗೆ ತಿಳಿಸಿದ್ದಾರೆ. ಡಿ.27ರಂದು ಜಿಗಣಿ ಪುರಸಭೆಗೆ ಮತದಾನಕ್ಕೆ ತೆರಳಿದ್ದ ಅರ್ಚನಾ ರೆಡ್ಡಿ ರಾತ್ರಿ 11ಗಂಟೆಯಲ್ಲಿ ತಾವು ವಾಸವಿದ್ದ ಬೆಳ್ಳಂದೂರಿಗೆ ವಾಪಾಸ್ಸಾಗುತ್ತಿದ್ದರು.
ಇವರನ್ನು ಹಿಂಬಾಲಿಸಿಕೊಂಡು ಬಂದ ಆರೋಪಿಗಳು ಹೊಸರೋಡ್ ಜಂಕ್ಷನ್ ಬಳಿಯ ರಸ್ತೆಯಲ್ಲಿ ಬರುತ್ತಿದ್ದಂತೆ ಕಾರನ್ನು ಅಡ್ಡಗಟ್ಟಿ , ಕಾರಿನ ಗಾಜು ಹೊಡೆದು, ಅರ್ಚನಾ ರೆಡ್ಡಿಗೆ ಮೇಲೆ ಮಾರಕಾಸ್ತ್ರಗಳಿಂದ ಭೀಕರವಾಗಿ ಹಲ್ಲೆ ಮಾಡಿದ್ದರು. ಇದರಿಂದ ತೀವ್ರವಾಗಿ ಗಾಯಗೊಂಡ ಅರ್ಚನಾ ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ತಡರಾತ್ರಿ ಮೃತಪಟ್ಟಿದ್ದರು. ದಾಳಿಯ ಸಂದರ್ಭದಲ್ಲಿ ಅರ್ಚನಾ ಅವರೊಂದಿಗೆ ಇದ್ದ ಮಗ ಹಾಗೂ ಚಾಲಕ ಕಾರಿನಿಂದ ಇಳಿದು ಓಡಿ ಹೋಗಿ ತಪ್ಪಿಸಿಕೊಂಡಿದ್ದರು.