ಮಹಿಳೆಯ ವಿವಸ್ತ್ರಗೊಳಿಸಿದ ಆರೋಪಿಗಳಿಗೆ ಜೈಲಿನಿಂದ ಹೊರಬರುವಾಗ ಹಾರ ಹಾಕಿ ಸ್ವಾಗತ

Krishnaveni K

ಮಂಗಳವಾರ, 23 ಏಪ್ರಿಲ್ 2024 (11:57 IST)
ಬೆಳಗಾವಿ: ಕಳೆದ ವರ್ಷ ಬೆಳಗಾವಿ ಅಧಿವೇಶನದ ವೇಳೆ ಸದ್ದು ಮಾಡಿದ್ದ ಮಹಿಳೆಯ ವಿಸ್ತ್ರಗೊಳಿಸಿ ಮೆರವಣಿಗೆ ಮಾಡಿ ವಿಕೃತಿ ತೋರಿದ್ದ ಆರೋಪಿಗಳು ಜೈಲಿನಿಂದ ಜಾಮೀನು ಪಡೆದು ಹೊರಬಂದಿದ್ದು, ಈ ವೇಳೆ ಅವರಿಗೆ ಹಾರ ತುರಾಯಿ ಹಾಕಿ ಸ್ವಾಗತಿಸಲಾಗಿದೆ.
 

ಈ ನಾಚಿಕೆಗೇಡಿನ ಘಟನೆ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಮಹಿಳೆಯ ವಿವಸ್ತ್ರಗೊಳಿಸಿದ ಪ್ರಕರಣ ಬೆಳಗಾವಿ ಅಧಿವೇಶನದಲ್ಲೂ ಸದ್ದು ಮಾಡಿತ್ತು. ಮಹಿಳೆಯನ್ನು ವಿವಸ್ತ್ರಗೊಳಿಸಿ ಆಕೆಯನ್ನು ಮೆರವಣಿಗೆ ಮಾಡಿದ್ದಲ್ಲದೆ, ಮರಕ್ಕೆ ಕಟ್ಟಿ ಹಾಕಿ ಹಲ್ಲೆ ನಡೆಸಲಾಗಿತ್ತು. ಕಳೆದ ಡಿಸೆಂಬರ್ ನಲ್ಲಿ ಈ ಘಟನೆ ನಡೆದಿತ್ತು.

ಈ ಹೇಯ ಕೃತ್ಯ ನಡೆಸಿದ ಆರೋಪಿಗಳನ್ನು ಬಂಧಿಸಲಾಗಿತ್ತು. ಇಷ್ಟು ದಿನ ಆರೋಪಿಗಳು ಹಿಂಡಾಲಗ ಜೈಲಿನಲ್ಲಿದ್ದರು. ಇದೀಗ ಆರೋಪಿಗಳನ್ನು ಷರತ್ತುಬದ್ಧ ಜಾಮೀನಿನಲ್ಲಿ ಬಿಡುಗಡೆ ಮಾಡಲಾಗಿದೆ. ಬಿಡುಗಡೆಯಾಗಿ ಹೊರ ಬರುವಾಗ ಅವರನ್ನು ಮೆರವಣಿಗೆಯಲ್ಲಿ ಕರೆತರಲು ಕೆಲವರು ಸಜ್ಜಾಗಿದ್ದರು. ಆದರೆ ಅದಕ್ಕೆ ಪೊಲೀಸರು ಅನುಮತಿ ಕೊಡಲಿಲ್ಲ.

ಹೀಗಾಗಿ ಹಾರ ಹಾಕಿ, ಪಟಾಕಿ ಹಚ್ಚಿ ಸಂಭ್ರಮಿಸಿ ಆರೋಪಿಗಳನ್ನು ಬರಮಾಡಿಕೊಳ್ಳಲಾಗಿದೆ. ಇದರ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಭಾರೀ ಆಕ್ರೋಶ ವ್ಯಕ್ತವಾಗಿದೆ. ಮಹಿಳೆಯ ಮಾನಭಂಗ ಮಾಡಿದ ಪಾಪಿಗಳಿಗೆ ಇಂತಹ ಸ್ವಾಗತ ನೀಡಿದ್ದಕ್ಕೆ ಧಿಕ್ಕಾರವಿರಲಿ ಎಂದು ನೆಟ್ಟಿಗರು ಛೀ ಥೂ ಎಂದು ಉಗಿದಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ