ಸುವರ್ಣಸೌಧದಲ್ಲಿ ಕಳಪೆ ಊಟ ಆರೋಪ: ಚಾಲಕರಿಗೆ ಯಾಕೆ ಈ ತಾರತಮ್ಯ?

ಗುರುವಾರ, 7 ಡಿಸೆಂಬರ್ 2023 (10:13 IST)
ಬೆಳಗಾವಿ: ಸುವರ್ಣಸೌಧದಲ್ಲಿ ನಡೆಯುತ್ತಿರುವ ವಿಶೇಷ ಅಧಿವೇಶನಕ್ಕೆ ಕರ್ತವ್ಯ ನಿರ್ವಹಿಸುತ್ತಿರುವ ಚಾಲಕರಿಗೆ ಸರಿಯಾದ ಊಟ ಸಿಗುತ್ತಿಲ್ಲ ಎಂಬ ಆರೋಪ ಕೇಳಿಬಂದಿದೆ.

ಸರ್ಕಾರಿ ಕಾರು ಚಾಲಕರು, ಗುತ್ತಿಗೆ ಕೆಲಸಗಾರರಿಗೆ ಸಂಗಮೇಶ್ವರನಗರದ ತರಬೇತಿ ಸಂಕೀರ್ಣದಲ್ಲಿ ವಸತಿ ಕಲ್ಪಿಸಲಾಗಿದೆ. ಆದರೆ ಇಲ್ಲಿ ಸೂಕ್ತ ವ್ಯವಸ್ಥೆ ಇಲ್ಲ ಎಂದು ಚಾಲಕರಿಂದ ಆಕ್ರೋಶ ವ್ಯಕ್ತವಾಗಿದೆ.

ಕಳಪೆ ಊಟ ನೀಡಲಾಗುತ್ತಿದೆ. ಈ ಬಗ್ಗೆ ಪ್ರಶ್ನಿಸಿದರೆ ಪೊಲೀಸರು ಆವಾಜ್ ಹಾಕುತ್ತಿದ್ದಾರೆ ಎಂದು ಚಾಲಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮೂರು ದಿನಗಳಿಂದ ಕುಡಿಯುವ ನೀರಿನ ವ್ಯವಸ್ಥೆ ಮಾಡಿಲ್ಲ. ಸರಿಯಾಗಿ ಬೇಯದ ಚಪಾತಿ ನೀಡುತ್ತಿದ್ದಾರೆ. ಶೌಚಾಲಯ ವ್ಯವಸ್ಥೆಯೂ ಸರಿಯಾಗಿಲ್ಲ ಎಂದು ಚಾಲಕರು ಅಳಲು ತೋಡಿಕೊಂಡಿದ್ದಾರೆ.

ಇಷ್ಟೊಂದು ಖರ್ಚು ಮಾಡಿ ಅಧಿವೇಶನ ನಡೆಸುವಾಗ ಜನ ನಾಯಕರಿಗೆ ಬೇಕಾದಂತೇ ಸೌಲಭ್ಯ ನೀಡಲಾಗುತ್ತಿದೆ. ಆದರೆ ಬಡಪಾಯಿ ಚಾಲಕರಿಗೆ ಮೂಲ ಸೌಕರ್ಯ ಒದಗಿಸಲೂ ಕಷ್ಟವೇ ಎಂದು ಆಕ್ರೋಶ ವ್ಯಕ್ತವಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ