ಜಾಹೀರಾತು ಫಲಕ ಕಾಣುವುದಿಲ್ಲವೆಂದು ರಸ್ತೆ ಬದಿ ಮರಗಳಿಗೆ ಅಸಿಡ್ ಹಾಕಿದ ದುಷ್ಕರ್ಮಿಗಳು

ಶನಿವಾರ, 4 ಮಾರ್ಚ್ 2017 (17:41 IST)
ಮರಗಳು ಅಡ್ಡವಿರುವುದರಿಂದ ಸರಿಯಾಗಿ ಜಾಹೀರಾತು ಫಲಕ ಕಾಣುವುದಿಲ್ಲವೆಂದು ದುಷ್ಟರ್ಮಿಗಳು 30ಕ್ಕೂ ಅಧಿಕ ಮರಗಳಿಗೆ ಹಾನಿ ಮಾಡಿರುವ ಪ್ರಕರಣ ಬೆಂಗಳೂರಿನನಲ್ಲಿ ಬೆಳಕಿಗೆ ಬಂದಿದೆ.
 

ಮಾರತಹಳ್ಳಿ ಬಳಿಯ ಚಿನ್ನಪ್ಪನಹಳ್ಳಿಯ ಕಳಾಮಂದಿರ್  ರಸ್ತೆಯಲ್ಲಿ ಈ ಘಟನೆ ನಡೆದಿದೆ. 17 ಮರಗಳ ಬುಡಕ್ಕೆ ಆಸಿಡ್ ಸುರಿಯಲಾಗಿದ್ದು, 14 ಮರಗಳನ್ನ ಬುಡವರೆಗೆ ಕತ್ತರಿಸಲಾಗಿದೆ. ಘಟನೆ ಕುರಿತಂತೆ ಪರಿಶೀಲನೆ ನಡೆಸಿರುವ ಬಿಬಿಎಂಪಿ ಅಧಿಕಾರಿಗಳು ಪೊಲೀಸರಿಗೆ ದೂರು ನೀಡಿದ್ಧಾರೆ.

ಈ ಮಾರ್ಗದಲ್ಲಿ ಸಂಚರಿಸುತ್ತಿದ್ದ ವೃಕ್ಷ ವೈದ್ಯರು ಮರಗಳು ಒಣಗುತ್ತಿರುವುದನ್ನ ಗಮನಿಸಿ ಬಿಬಿಎಂಪಿ ಅಧಿಕಾರಿಗಳಿಗೆ ಮಾಹಿತಿ ನೀಡಿದಾಗ ಪ್ರಕರಣ ಬೆಳಕಿಗೆ ಬಂದಿದೆ. ರಾತ್ರೋರಾತ್ರಿ ಮರಗಳಿಗೆ ವಿಷಹಾಕುವ ದುಷ್ಕೃತ್ಯ ನಡೆದಿದೆ. ಮರಗಳಿಗೆ ವಿಷವಿಕ್ಕುವ ಕುಕೃತ್ಯ ಹಲವು ದಿನಗಳ ಹಿಂದೆಯೇ ನಡೆದಿದ್ದು ಬಿಬಿಎಂಪಿಯ ಮೌನ ಅನುಮಾನ ಮುಡಿಸಿದೆ.

 

ವೆಬ್ದುನಿಯಾವನ್ನು ಓದಿ