ದಿವ್ಯಾ, ನಟ ಅಮ್ಜಾದ್ ಖಾನ್ ಜೊತೆ ಮದುವೆಯಾಗಿರುವುದಾಗಿ ಹೇಳಿದ್ದಾರೆ. ತಮಿಳು ಮಾಧ್ಯಮವೊಂದಕ್ಕೆ ಮಾತನಾಡಿದ್ದು, ನಾವಿಬ್ಬರು ಒಂದೇ ಧಾರಾವಾಹಿಯಲ್ಲಿ ನಟಿಸುತ್ತಿದ್ದೆವು. ಮೊದಲಿಗೆ ಅವರು ಮುಸ್ಲಿಂ ಎಂದು ತಿಳಿದಿರಲಿಲ್ಲ. ಇಬ್ಬರು ಪರಸ್ಪರ ಪ್ರೀತಿಸಲು ಶುರು ಮಾಡಿದೆವು. ಬಳಿಕ ಅವರಿಗಾಗಿ ನಾನು ಇಸ್ಲಾಂ ಧರ್ಮಕ್ಕೂ ಮತಾಂತರಗೊಂಡಿದ್ದೆ. ಹಿಂದೂ ಸಂಪ್ರದಾಯದಂತೆ ಕೂಡ ಮದುವೆಯಾಗಿದ್ದೇವೆ. ಕಂಚಿಯಲ್ಲಿ ದೇವಸ್ಥಾನ ಒಂದರಲ್ಲಿ ಮದುವೆಯಾಗಿದ್ದೆವು.